ಸುಳ್ಯ : ಸಂಪಾಜೆ ಗಡಿಕಲ್ಲು ಬಳಿ ತೋಡಿಗೆ ಉರುಳಿ ಬಿದ್ದ ಸರ್ಕಾರಿ ಬಸ್ !! | ಬಸ್ಸಿನಿಂದ ಹೊರಬರಲಾರದೆ ಪರದಾಡಿದ 25 ಮಂದಿ ಪ್ರಯಾಣಿಕರು

Share the Article

ಸರ್ಕಾರಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ತೋಡಿಗೆ ಉರುಳಿ ಬಿದ್ದ ಘಟನೆ ಸಂಪಾಜೆ ಗಡಿಕಲ್ಲು ಬಳಿ ಸಂಭವಿಸಿದೆ.

ಧರ್ಮಸ್ಥಳದಿಂದ ಗುಂಡ್ಲುಪೇಟೆಗೆ ಹೋಗುವ ಬಸ್ ಸುಳ್ಯ ದಾಟಿ ಹೋಗುತ್ತಿದ್ದಾಗ ಸಂಪಾಜೆಯ ಗಡಿಕಲ್ಲು ಬಳಿ ತೋಡಿಗೆ ಉರುಳಿ ಬಿದ್ದಿದೆ. ಬಸ್ಸಲ್ಲಿದ್ದ ಸುಮಾರು 25 ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಬಸ್ಸಿನಿಂದ ಹೊರಬರಲಾರದೆ ಜನ ಪರದಾಡಿದ್ದು, ಇದೀಗ ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ತರಲಾಗುತ್ತಿದೆ.

Leave A Reply

Your email address will not be published.