ಪುತ್ತೂರು : ರೈಲು ಡಿಕ್ಕಿಯಾಗಿ ಕಾಡುಕೋಣ ಮತ್ತು ಮರಿ ಸಾವು

0 11

ಪುತ್ತೂರು : ನರಿಮೊಗರು ಗ್ರಾಮದ ಗಡಿಪ್ಪಿಲ ರೈಲ್ವೆ ಹಳಿಯಲ್ಲಿ ಕಾಡುಕೋಣ ಮತ್ತು ಅದರ ಮರಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ. ಕೃಷಿ ತೋಟಗಳಿಗೆ ಮೇವು ಅರಸಿ‌ ಬಂದಿದ್ದ ಕಾಡುಕೋಣಗಳು ಮರಳಿ ಕಾಡು ಸೇರಲು ರೈಲ್ವೆ ಹಳಿಯಲ್ಲಿ ಹೋಗುತ್ತಿದ್ದ‌ ಸಂದರ್ಭದಲ್ಲಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದೆ.

ಘಟನಾ ಸ್ಥಳಕ್ಕೆ ಎಸಿಪಿ ಕಾರ್ಯಪ್ಪ, ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್, ನರಿಮೊಗರು ಉಪವಲಯಾರಣ್ಯಾಧಿಕಾರಿ ಕುಮಾರಸ್ವಾಮಿ, ಪುತ್ತೂರು ಉಪವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಅರಣ್ಯ ರಕ್ಷಕರಾದ ಸತ್ಯನ್ ಡಿ.ಜಿ.ಹಾಗೂ ದೀಪಕ್ ಭೇಟಿ ನೀಡಿದ್ದಾರೆ. ನಂತರ ಕಾಡುಕೋಣಗಳ ಮರಣೋತ್ತರ ಮಹಜರನ್ನು ಮಾಡಿದ್ದಾರೆ.

Leave A Reply