ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್| ಯಾರೆಲ್ಲಾ ಉಚಿತ ಲ್ಯಾಪ್‌ಟಾಪ್ ಗೆ ಅರ್ಹರು ? ಎಲ್ಲಾ ಮಾಹಿತಿ ಇಲ್ಲಿದೆ

0 12

ಕರ್ನಾಟಕ ಸರ್ಕಾರವು ಶಿಕ್ಷಣದ ಗುಣಮಟ್ಟ ಕಾಪಾಡಲು, ಉನ್ನತ ಶಿಕ್ಷಣಕ್ಕೆ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಒಂದು ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುವುದು. ಕರ್ನಾಟಕದ ಈ ಉಚಿತ ಲ್ಯಾಪ್‌ಟಾಪ್ ಯೋಜನೆಯ ಸೌಲಭ್ಯಗಳನ್ನು ಯಾರೆಲ್ಲ ಪಡೆಯಬಹುದು, ಅರ್ಜಿ ಸಲ್ಲಿಕೆ ಹೇಗೆ, ಅಪ್ಲಿಕೇಶನ್ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

ಕರ್ನಾಟಕ ಸರ್ಕಾರದ ಉಚಿತ ಲ್ಯಾಪ್‌ಟಾಪ್ ಸೌಲಭ್ಯವನ್ನು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುತ್ತದೆ. ವಿದ್ಯಾರ್ಥಿಗಳು ಅಪ್ಲಿಕೇಶನ್ ಅನ್ನು ಕಾಲೇಜು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ dce.karnataka.gov.in ನಲ್ಲಿ ಪಡೆದುಕೊಳ್ಳಬಹುದು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪಾಸ್ ಮಾಡಿ ಅಥವಾ ಸಿಬಿಎಸ್‌ಇ ಬೋರ್ಡ್‌ನಿಂದ 12ನೇ ತರಗತಿ ಉತ್ತೀರ್ಣರಾಗಿ, ರಾಜ್ಯದ ಯಾವುದೇ ಸರ್ಕಾರಿ ಹಾಗೂ ಅನುದಾನಿತ ಸ್ನಾತಕ ಕೋರ್ಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಸೌಲಭ್ಯ ಸಿಗಲಿದೆ.

ಅರ್ಹತೆ : ವಿದ್ಯಾರ್ಥಿ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಯಾವುದೇ ಕೆಟಗರಿ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಎಸ್ಸಿ / ಎಸ್ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುತ್ತದೆ. ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ನಾತಕ ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆದಿರಬೇಕು.

ಬೇಕಾಗುವ ದಾಖಲೆಗಳು:

ರಾಜ್ಯದ ನಿರ್ದಿಷ್ಟ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ವಸತಿ ಪ್ರಮಾಣ ಪತ್ರ. ಆಧಾರ್ ಲಿಂಕ್ ಮಾಡಿರುವ ಬ್ಯಾಂಕ್ ಖಾತೆ ಜೆರಾಕ್ಸ್ ಪ್ರತಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ.
ಇತ್ತೀಚಿಗೆ ತೆಗೆಸಿದ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ. ವಿದ್ಯಾರ್ಹತೆ ಪ್ರಮಾಣ ಪತ್ರ ( ಪಿಯುಸಿ ಅಂಕಪಟ್ಟಿ), ಪದವಿಗೆ ಪ್ರವೇಶ ಪಡೆದಿರುವ ಕುರಿತು ದಾಖಲೆ.

ಕರ್ನಾಟಕ ಪದವಿ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಪದವಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್ https:/dce.karnataka.gov.in ಗೆ ಭೇಟಿ ನೀಡಿ ನಂತರ ಉಚಿತ ಲ್ಯಾಪ್‌ಟಾಪ್ ಸ್ಕಿಮ್ ಗೆ ಸಂಬಂಧಿಸಿದ ಲಿಂಕ್ ಓಪನ್ ಮಾಡಿ, ಅನಂತರ ಓಪನ್ ಅದ ಪಿಡಿಎಫ್ ಫೈಲ್ ಪ್ರಿಂಟ್ ತೆಗೆದುಕೊಳ್ಳಿ. ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೆರಾಕ್ಸ್ ಕಾಪಿಗಳನ್ನು ಲಗತ್ತಿಸಿ. ಅರ್ಜಿಯನ್ನು ನೇರವಾಗಿ ಕಾಲೇಜು ಶಿಕ್ಷಣ ಇಲಾಖೆ ಅಥವಾ ಕಾಲೇಜಿನ ಆಡಳಿತ ವಿಭಾಗಕ್ಕೆ ತಲುಪಿಸಬೇಕು.

ವೈದ್ಯಕೀಯ ಕೋರ್ಸ್‌ಗಳು, ಬಲ ಪದವಿ ವ್ಯಾಸಂಗ ಮಾಡುತ್ತಿರುವವರು, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಥಮ ವರ್ಷದ ಯಾವುದೇ ಪದವಿ ಓದುತ್ತಿರುವವರು, ಈ ಹಿಂದೆ ಉಚಿತ ಲ್ಯಾಪ್‌ಟಾಪ್ ಸೌಲಭ್ಯ ಪಡೆಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕುರಿತು ತಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ವಿಭಾಗದವರಲ್ಲಿ ಸಂಪರ್ಕಿಸಿ, ನಂತರ ಅರ್ಜಿ ಸಲ್ಲಿಸುವುದು.

ಕಾಲೇಜುಗಳ ಪಟ್ಟಿ ಚೆಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಖಾಸಗಿ ಅನುದಾನಿತ ಕಾಲೇಜುಗಳು –ಕ್ಲಿಕ್ ಮಾಡಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು – ಕ್ಲಿಕ್ ಮಾಡಿ

Leave A Reply