ಸ್ಯಾಂಡಲ್ ವುಡ್ ನ ಖ್ಯಾತಿ ನಟಿಯ ಸಹೋದರನ ಮೇಲೆ ಅತ್ಯಾಚಾರ ಆರೋಪ !

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರ ಸೋದರ ಕೀರ್ತಿಚಂದ್ರ ಅಲಿಯಾಸ್ ವಿರಾಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಸಂತ್ರಸ್ತ ಯುವತಿ ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಸಂತ್ರಸ್ತ ಯುವತಿ ಕಂಪನಿ ಒಂದರಲ್ಲಿ ಉದ್ಯೋಗದಲ್ಲಿದ್ದು, ಶಾದಿ ಡಾಟ್ ಕಾಮ್ ನಲ್ಲಿ ತನ್ನ ಸ್ವವಿವರ ಹಾಕಿದ್ದು, ಸೂಕ್ತ ವರನಿಗಾಗಿ ಹುಡುಕಾಟ ಮಾಡಿದ್ದಳು. ಈ ಸಂದರ್ಭದಲ್ಲಿ ವಿರಾಜ್ ತನ್ನ ವಿವರ ಹೇಳಿಕೊಂಡು ಸ್ನೇಹ ಬೆಳೆಸಿದ್ದಾನೆ. ತನ್ನ ತಂಗಿ ಫೇಮಸ್ ನಟಿಯೆಂದು ಹೇಳಿದಗದಾನೆ. ನಂತರ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಸ್ನೇಹ ಬೆಳೆಸಿದ್ದಾನೆ.

2021ರ ಮೇ ತಿಂಗಳಲ್ಲಿ ವಿರಾಜ್ ಯುವತಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಸ್ನೇಹ ಬೆಳೆಸಿದ್ದ. ನಂತರ ಮದುವೆ ಬಗ್ಗೆ ಎರಡೂ ಮನೆಯವರಲ್ಲಿ ಮಾತುಕತೆ ನಡೆದಿತ್ತು. ಈ ನಡುವೆ, ಆರೋಪಿ ವಿರಾಜ್ ಬರ್ತ್ ಡೇಗೆ ಯುವತಿಯೇ ಐಫೋನ್, ಲ್ಯಾಪ್ಟಾಪ್ ಖರೀದಿಸಿ ಗಿಫ್ಟ್ ನೀಡಿದ್ದಳು. ಆನಂತರ ಜನವರಿ 18ರಂದು ಜಯನಗರದ ಖಾಸಗಿ ಹೊಟೇಲ್ ಗೆ ವಿರಾಜ್ ಬರಹೇಳಿದ್ದು, ಅಲ್ಲಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಆ ಬಳಿಕ ಫೋನ್ ಸಂಪರ್ಕ ಕಡಿತ ಮಾಡಿಕೊಂಡು ಮೋಸ ಮಾಡಿದ್ದಾನೆ.

ಕರೆ ಮಾಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಯುವತಿ ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಆರೋಪಿ ವಿರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸದೆ ವಿಳಂಬ ಧೋರಣೆ ತೋರುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ಹೀಗಾಗಿ ಆರೋಪಿ ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುತ್ತಿದ್ದಾನೆ ಎನ್ನಾಗಿದೆ.

Leave A Reply