ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ಮಹಿಳೆಯೊಬ್ಬರು ರಾತ್ರಿ ಏಕಾಏಕಿ ನಾಪತ್ತೆಯಾದ ಘಟನೆ ಮಂಗಳೂರು ನಗರದ ಬಜಪೆಯಲ್ಲಿ ನಡೆದಿದೆ.
ನಾಪತ್ತೆಯಾದ ಮಹಿಳೆಯನ್ನು ಮುಮ್ತಾಜ್ (43) ಎಂದು ಗುರುತಿಸಲಾಗಿದೆ.
ಮನೆಯವರು ಎಲ್ಲಾ ಕಡೆ ಹುಡುಕಾಡಿ ವಿಚಾರಿಸಿದರೂ ಕೂಡಾ ಮುಮ್ತಾಜ್ ಪತ್ತೆಯಾಗಿಲ್ಲ. ಕೊನೆಗೆ ದಾರಿ ತೋಚದೆ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.