ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಯ ವಿಶೇಷತೆ; ಇಲ್ಲಿ ಕೋಣ ಬಲಿ ನಿಷೇಧ ಆಗಿದ್ದು ಹೇಗೆ ಗೊತ್ತೆ ?

ದಕ್ಷಿಣ ಭಾರತದ ವ್ಯಾಪ್ತಿಯ ಬಹು ದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ. ಎರಡು ವರ್ಷಕೊಮ್ಮೆ ನಡೆಯುತ್ತದೆ. ಹತ್ತು ದಿನಗಳ ಕಾಲ ಈ ಜಾತ್ರೆಯ ಸಡಗರ ಸಂಭ್ರಮದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ. ಈ ಜಾತ್ರೆಯ ಇತಿಹಾಸ, ವಿಶೇಷತೆಯ ಬಗ್ಗೆ ಇಲ್ಲಿದೆ ತಿಳಿಯಿರಿ

ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಮೂರೂವರೆ ಶತಮಾನಗಳ ಇತಿಹಾಸವಿದೆ ಸ್ಥಳೀಯ ಕೋಟೆ ಕೆರೆಯ ನೀರಿನಲ್ಲಿ ಪತ್ತೆಯಾದ ವಿಗ್ರಹವನ್ನು ಸೋದೆ ಅರಸರ ಕಾಲದಲ್ಲಿ ಪ್ರತಿಷ್ಠಾಪಿಸಲಾಯಿತು.‌ ಮಾರಿಜಾತ್ರೆ ಎಂದು ಸ್ಥಳೀಯರಿಂದ ಕರೆಸಿಕೊಳ್ಳುವ ಈ ಜಾತ್ರೆ ಬೇರೆ ಕ್ಷೇತ್ರಗಳ ಜಾತ್ರೆ, ರಥೋತ್ಸವಗಳಿಗಿಂತ ವಿಭಿನ್ನ. ಶಿರಸಿ ಜಾತ್ರೆಯಲ್ಲಿ ಏಳಡಿ ಎತ್ತರದ ಮೂಲ ದೇವಿಯ ವಿಗ್ರಹವನ್ನೇ ಅಲಂಕಾರ ಸಮೇತ ಹೊರ ತಂದು, ಮದುವೆ ನೆರವೇರಿಸಿ, ಮೆರವಣಿಗೆಯಲ್ಲಿ ಬಿಡಕಿ ಬಯಲಿ’ಗೆ( ಜಾತ್ರಾ ಗದ್ದುಗೆ ಇಡುವ ಸ್ಥಳ) ಕೊಂಡೊಯ್ಯಲಾಗುತ್ತದೆ. ಅಂದಿನಿಂದಲೇ ಜಾತ್ರೆ ಆರಂಭ.10 ದಿನ ಜಾತ್ರೆ ಮುಗಿದ ಮೇಲೆ ಯುಗಾದಿ ಹಬ್ಬದಂದು ದೇವಿ ಪ್ರತಿಷ್ಟಾಪನೆ ಆಗುತ್ತದೆ.


Ad Widget

Ad Widget

Ad Widget

Ad Widget

Ad Widget

Ad Widget

ಇನ್ನೊಂದು ವಿಶೇಷವೆಂದರೆ ಮಾರಿಜಾತ್ರೆ ಇರೋ ವರ್ಷ ಇಡೀ ಶಿರಸಿ ನಗರದಲ್ಲಿ ಹೋಳಿಹುಣ್ಣಿಮೆ ಹಬ್ಬವನ್ನು ಆಚರಿಸುವುದಿಲ್ಲ. ಎಲ್ಲಿಯೂ ಕಾಮನ ಮೂರ್ತಿ ಪ್ರತಿಷ್ಠಾಪಿಸಲ್ಲ. ಬಣ್ಣದಾಟವನ್ನೂ ಕೂಡ ಯಾರೂ ಆಡುವುದಿಲ್ಲ.‌ ಶಿರಸಿ ತಾಲೂಕಿನ ಯಾವುದೇ ಊರಿನಲ್ಲೂ ಜಾತ್ರೆ ಮುಗಿಯುವ ತನಕ ಮದುವೆ-ಮುಂಜಿಗಳಂಥ ಕಾರ್ಯಕ್ರಮ ಹಮ್ಮಿಕೊಳ್ಳುವುದಿಲ್ಲ. 

ಜಾತ್ರೆಯು ದೇವಿಗೆ ಮದುವೆ ಮಾಡುವ ಸಂಪ್ರದಾಯದೊಂದಿಗೆ ಪ್ರಾರಂಭವಾಗಿ ಒಂಬತ್ತನೇ ದಿನ ಕೋಣನ ಬಲಿ ಕೊಟ್ಟು ಚಪ್ಪರಕ್ಕೆ ಬೆಂಕಿ ಹಚ್ಚುವುದರೊಂದಿಗೆ ಕೊನೆಯಾಗುತ್ತದೆ. 24 ತಾಸು ಜಾತ್ರೆ ನಡೆಯುತ್ತದೆ. ನಾಟಕ ಕಂಪನಿ, ಸರ್ಕಸ್, ಯಕ್ಷಗಾನ ಮಂಡಣಿ, ಆಟಗಳು, ಅಂಗಡಿಮುಗ್ಗಟ್ಟುಗಳು ಬಂದಿರುತ್ತದೆ. ಅಂಗಡಿ ಜಾಗಗಳು ಕೋಟಿ ರೂಪಾಯಿಗೆ ಹರಾಜು ಆಗುತ್ತದೆ.

1930 ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಉತ್ತರ ಕನ್ನಡದ ಶಿರಸಿಗೆ ಬಂದಿದ್ದರು. ಆಗ ಸ್ಥಳೀಯ ಪ್ರಮುಖರು ಮಾರಿಕಾಂಬಾ ದೇವಾಲಯಕ್ಕೆ ಆಗಮಿಸುವಂತೆ ಗಾಂಧೀಜಿಯವರನ್ನು ವಿನಂತಿಸಿಕೊಂಡರು ಆದರೆ ಆಗಿನ ಸಮಯದಲ್ಲಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ನೀಡಲಾಗುತ್ತದೆ ಹಾಗಾಗಿ ಗಾಂಧಿಜಿ  ದೇವಿಯ ಜಾತ್ರೆಯ ಸಂದರ್ಭದಲ್ಲಿ ಇನ್ನು ಎಂದಿಗೂ ಕೋಣನ ಬಲಿ ನೀಡುವುದಿಲ್ಲ ಎಂದಾದರೆ  ಮಾತ್ರ ದೇವಾಲಯಕ್ಕೆ ಬರುವುದಾಗಿ ಮಹಾತ್ಮಾ ಗಾಂಧೀಜಿಯವರು ಹೇಳಿದರು ಈ ವಿಷಯದ ಕುರಿತು ಪರ ಮತ್ತು ವಿರುದ್ಧವಾಗಿ ಭಾರಿ ವಾಗ್ವಾದ ನಡೆದು ಅಂತಿಮವಾಗಿ ಜಾತ್ರೆಯ ಸಂದರ್ಭದಲ್ಲಿ ಕೋಣನ ಬಲಿ ಕೊಡುವುದಿಲ್ಲ ಎಂಬ ವಾಗ್ದಾನ ಮಾಡಲಾಯಿತು. ಈ ಘೋಷಣೆಯಿಂದ ಸಂತಸಗೊಂಡ ಮಹಾತ್ಮಾ ಗಾಂಧೀಜಿಯವರು ದೇವಾಲಯಕ್ಕೆ ಬಂದು ದೇವಿಯ ದರ್ಶನ ಪಡೆದರು.‌ ದೇವಾಲಯದಲ್ಲಿ ಪಟ್ಟದ ಕೋಣವನ್ನು ಸಾಕಲಾಗುತ್ತದೆ ಆದರೆ ಅದನ್ನು ಬಲಿ ಕೊಡುವ ಸಂಪ್ರದಾಯ ಸಂಪೂರ್ಣವಾಗಿ ನಿರ್ಬಂಧವಾಗಿದೆ.

error: Content is protected !!
Scroll to Top
%d bloggers like this: