‘ಲಾಕಪ್’ ಶೋ ನಲ್ಲಿ ತನ್ನ ಅಮ್ಮನ ಸ್ನೇಹಿತೆ ಜೊತೆಗಿನ ‘ ರಹಸ್ಯ’ ಸಂಬಂಧ ಬಿಚ್ಚಿಟ್ಟ ಶಿವಂ ಶರ್ಮಾ ಸ್ಪರ್ಧಿ | ಈತನ ರಹಸ್ಯ ಕೇಳಿ ದಂಗಾದ ಸಹ ಸ್ಪರ್ಧಿಗಳು!

0 5

ಬಾಲಿವುಡ್ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿರುವ “ಲಾಕಪ್” ಹೆಸರಿನ ರಿಯಾಲಿಟಿ ಶೋ ದಿನದಿಂದ ತನ್ನ ಖ್ಯಾತಿಯನ್ನು ಹೆಚ್ಚು ಮಾಡಿದೆ. ಇದಕ್ಕೆ ಕಾರಣ ವಿವಾದಿತ ಸೆಲೆಬ್ರಿಟಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್‌ನಲ್ಲಿ 72 ದಿನಗಳ ಕಾಲ ಬಂಧಿಸಿಡುವುದೇ ಈ ಶೋ ನ ಮುಖ್ಯ ಉದ್ದೇಶ. ಎಕ್ತಾ ಕಪೂರ್ ನಿರ್ಮಾಣ ಮಾಡುತ್ತಿರುವ ಈ ಶೋ, ಆಲ್ಟ್ ಬಾಲಾಜಿ ಮತ್ತು ಎಂಎಕ್ಸ್ ಪ್ಲೇಯರ್‌ನಲ್ಲಿ 24X7 ಪ್ರಸಾರವಾಗುತ್ತಿದೆ.

ಸ್ಪರ್ಧಿಗಳು ತಮ್ಮ ರಹಸ್ಯಗಳನ್ನು ಹೊರಗಾಕುವ ಮೂಲಕ ಈ ಕಾರ್ಯಕ್ರಮ ವೀಕ್ಷಕರಲ್ಲಿ ಹೆಚ್ಚು ಕೂತಹಲವನ್ನು ಸೃಷ್ಟಿ ಮಾಡುತ್ತಿದೆ.

ಈ ಶೋನಲ್ಲಿ ಪೂನಂ ಪಾಂಡೆ ತಮ್ಮ ವೈವಾಹಿಕ ಜೀವನದ ರಹಸ್ಯವನ್ನು ಹೊರಗೆ ಹಾಕಿದ್ದರು. ಇದೀಗ ಮತ್ತೊಬ್ಬ ಸ್ಪರ್ಧಿ ಶಿವಂ ಶರ್ಮಾ ತಮ್ಮ ಕುರಿತ ರಹಸ್ಯವೊಂದನ್ನು ಬಹಿರಂಗಪಡಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಈ ಶೋನಲ್ಲಿ ಶಿವಂ ಶರ್ಮಾ, ಕರಣ್ ವೀರ್ ಬೊಹ್ರಾ ಮತ್ತು ಪಾಯಲ್ ರೊಹಟಗಿ ಹೆಸರು ಚಾರ್ಜ್‌ಶೀಟ್‌ನಲ್ಲಿತ್ತು. ಎಲಿಮಿನೇಷನ್‌ನಿಂದ ಮೊದಲು ತನ್ನನ್ನು ರಕ್ಷಿಸಿಕೊಳ್ಳಲು ಶಿವಂ ಮೊದಲು ಬಜರ್ ಅನ್ನು ಒತ್ತಿದರು.

ಕಾರ್ಯಕ್ರಮದ ನಿಯಮದ ಪ್ರಕಾರ ಮೊದಲು ಬಜರ್ ಒತ್ತಿದವರು ತಮ್ಮ ಜೀವನದ ಯಾರಲ್ಲಿಯೂ ಹೇಳಲಿಕ್ಕೆ ಸಾಧ್ಯವಾಗದ ರಹಸ್ಯವೊಂದು ಹೇಳಬೇಕು. ಅದರಂತೆ ರಹಸ್ಯವನ್ನು ಹೇಳಿ ಶಿವಂ, ತನ್ನ ತಾಯಿಯ ಸ್ನೇಹಿತೆ ಆಕೆ ಡಿವೋರ್ಸ್ ಆಗಿದ್ದು ತನ್ನ ಗಂಡನಿಂದ ಬೇರೇನೇ ವಾಸವಾಗಿದ್ದರು. ಆಕೆಗೆ ಲೈಂಗಿಕಾಸಕ್ತಿ ಇತ್ತು. ಹಾಗಾಗಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕ ಸಂಪರ್ಕ ನಡೆಸಿದೆವು ಎಂದು ಶೋನಲ್ಲಿ ಕಂಗನಾ ಎದರು ಹೇಳಿದ್ದಾನೆ.

ಇದನ್ನು ಕೇಳಿದ ಕೆಲವೊಂದು ಸ್ಪರ್ಧಿಗಳು ದಂಗಾದರು. ಹಾಗೂ ಅವರು ಈತನ ಈ ನಡೆಯ ಬಗ್ಗೆ ತಮ್ಮದೇ ಆದ ವಿವರಣೆಯನ್ನು ನೀಡಿದ್ದಾರೆ.

ಶಿವಂ ತನ್ನ ಮಾತನ್ನು ಮುಂದುವರಿಸುತ್ತಾ, ಆಕೆ ನನ್ನ ತಾಯಿಯ ಸ್ನೇಹಿತೆ, ನಮ್ಮ ಮನೆಯ ಪಕ್ಕದಲ್ಲೇ ವಾಸವಿದ್ದರು. ಅವರು ಡಿವೋರ್ಸ್ ಪಡೆದುಕೊಂಡಿದ್ದರು. ಅವರಿಗೆ ಲೈಂಗಿಕ ಜೀವನ ಬೇಕಾಗಿತ್ತು. ನಾನು ವೈಟ್ ಸಾಸ್ ಪಾಸ್ತಾ ಚೆನ್ನಾಗಿ ಮಾಡುತ್ತಿದ್ದೆ. ಅದನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಇದೆಲ್ಲಾ ನಡೆದಿರುವುದು ನಾನು ಕಾಲೇಜಿನಲ್ಲಿರುವಾಗ, ಅಂದರೆ ಸುಮಾರು 8 ರಿಂದ 9 ವರ್ಷಗಳ ಹಿಂದೆ ಇದು ನಡೆದಿರುವುದು ಎಂದು ಈ ಘಟನೆಯ ಬಗ್ಗೆ ಎಳೆಎಳೆಯಾಗಿ ಈ ಲಾಕಪ್ ಶೋನಲ್ಲಿ ಹೇಳಿದ್ದಾನೆ.

Leave A Reply