ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಸುಮಂತಾ ಅವರ ಒಂದು ಸಿನಿಮಾದ ಸಂಭಾವನೆ ಎಷ್ಟು ಗೊತ್ತೆ ?

ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಹೀಗೆ ಹಲವು ರಸಿಕರ ಕೈಯಲ್ಲಿ ಬಾಯಲ್ಲಿ ಹಲವು ಹೆಸರುಗಳಲ್ಲಿ ಕರೆಸಿಕೊಳ್ಳುವ ನಟಿ ಸೌತ್​ ಬ್ಯೂಟಿ ಸಮಂತಾ ಸದ್ಯ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ಹಿಂದಿಯ ಫ್ಯಾಮಿಲಿ ಮ್ಯಾನ್ 2 ಚಿತ್ರ, ಅಲ್ಲು ಅರ್ಜುನ್ ಅವರ ಪುಷ್ಪಾದಲ್ಲಿನ ಐಟಂ ಸಾಂಗ್​ ಬಳಿಕ  ಅಭಿಮಾನಿಗಳನ್ನು ಗಣನೀಯವಾಗಿ ಸಂಪಾದಿಸಿದ್ದಾರೆ. ಸುಮಂತಾ ಸುಪ್ರಸಿದ್ಧಿ ಪಡೆಯುತ್ತಿದ್ದು ಅವರ ಸಂಭಾವನೆಯೂ ಹೆಚ್ಚಾಗಿದೆ. ಮದುವೆ ಆದರೂ, ಸಂಸಾರ ಹೂಡಿದರೂ, ಕೊನೆಗೆ ಡೈವೋ್ಸ್ ಪಡೆದುಕೊಂಡರೂ, ಊಹೂಂ ಆಕೆಯ ಸೌಂದರ್ಯಕ್ಕೇನೂ ಮುಕ್ಕಾಗಿಲ್ಲ. ಈ ಸುಮಂತಾಳ ಒಂದು ಸಿನಿಮಾದ ಸಂಭಾವನೆ ಎಷ್ಟು ಗೊತ್ತೆ ?

ಸಮಂತಾ ತನ್ನ ಮುಂದಿನ ಚಿತ್ರವಾದ ಕಾತುವಾಕುಲಾ ರೆಂಡು ಕಾದಲ್ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾತುವಾಕುಲ ರೆಂಡು ಕಾದಲ್ ಏಪ್ರಿಲ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


Ad Widget

Ad Widget

Ad Widget

ಗುಣಶೇಖರ್​ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಶಾಕುಂತಲಂ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಬಿಡುಗಡೆಗೆ ಸಿದ್ಧಬಾಗಿದೆ.ಅಷ್ಟೇ ಅಲ್ಲದೆ ಸುಮಂತ ತಮಿಳು ಮತ್ತು ತೆಲುಗು ದ್ವಿಭಾಷಾ ಸಿನಿಮಾ ಯಶೋಧಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್​ಗೂ ಹಾರಿದ ಸಮಂತಾ, ಫಿಲಿಪ್​ ಜಾನ್​​ ನಿರ್ದೇಶನದ ಅರೆಂಜ್​ಮೆಂಟ್ಸ್​ ಆಫ್​ ಲವ್​ ಚಿತ್ರಕ್ಕೆ ಅಭಿನಯಿಸಲಿದ್ದಾರೆ.

ಸಾಲು ಸಾಲು ಯಶಸ್ಸಿನ ಜತೆಗೆ ಸಮಂತಾರ ಸಂಭಾವನೆ ಕೂಡ ಭರಪೂರ ಏರಿದೆ . ಸಮಂತಾ ದಕ್ಷಿಣ ಭಾರತದ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ಪುಷ್ಪ ಚಿತ್ರದಲ್ಲಿನ ವಿಶೇಷ ಹಾಡಿಗೆ ಸಮಂತಾ 5 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ತನ್ನ ಸಿನಿಮಾಗಳಿಗೆ 3 ರಿಂದ 5 ಕೋಟಿ ರೂ. ತೆಗೆದುಕೊಳ್ಳುತ್ತಾರಂತೆ.

Leave a Reply

error: Content is protected !!
Scroll to Top
%d bloggers like this: