ಜಪಾನ್ ಶಾಲೆಗಳಲ್ಲಿ ಪೋನಿಟೇಲ್ ಹೇರ್‌ಸ್ಟೈಲ್ ನಿಷೇಧ, ಒಳ ಉಡುಪಿನ ಬಣ್ಣಕ್ಕೂ ನಿಯಮ
ಹುಡುಗಿಯರಿಗೆ ಹೆಚ್ಚು ಸುಲಭ ಹಾಗೂ ಆರಾಮ ಎನಿಸುವ ಕೇಶವಿನ್ಯಾಸವೆಂದರೆ ಪೋನಿಟೇಲ್.
ನೀಳವಾದ ಕೂದಲಿದ್ದೂ ಫೋನಿಟೇಲ್ ಹಾಕದಿರುವ ಮಹಿಳೆ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಜಪಾನ್ ದೇಶದ ಶಾಲೆಗಳಲ್ಲಿ ಪೋನಿಟೇಲ್ ಹೇರ್ ಸ್ಟೈಲ್‌ನ್ನು ಬ್ಯಾನ್ ಮಾಡಲಾಗಿದೆ.
ಇದಕ್ಕೆ ಕಾರಣ ಇಲ್ಲಿದೆ. ಮಹಿಳೆಯರ ಕತ್ತಿನ ಭಾಗ ಪುರುಷರಿಗೆ ಹೆಚ್ಚಿನ ಲೈಂಗಿಕ ಪ್ರಚೋದನೆ ನೀಡುತ್ತದೆ. ಮಹಿಳೆಯರು ಫೋನಿಟೇಲ್ ಹಾಕಿಕೊಂಡಲ್ಲಿ ಕತ್ತು ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ ಎಂಬ ಕಾರಣಕ್ಕೆ ಜಪಾನ್‌ನ ಶಾಲೆಗಳಲ್ಲಿ ಮಕ್ಕಳು ಪೋನಿಟೇಲ್ ಹೇರ್ ಸ್ಟೈಲ್ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ.
ಜಪಾನ್ ಕೇವಲ ಕೇಶವಿನ್ಯಾಸದ ಬಗ್ಗೆ ನಿರ್ಬಂಧ ಹೇರಿರದೇ ಹುಡುಗಿಯರ ಉಡುಪುಗಳ ಬಗ್ಗೆಯೂ ನಿರ್ಬಂಧ ಹೇರಿದೆ. ಶಾಲೆಗೆ ಹೋಗುವ ಹುಡುಗಿಯರು ಕೇವಲ ಬಿಳಿ ಬಣ್ಣದ ಒಳ ಉಡುಪುಗಳನ್ನು ಮಾತ್ರವೇ ಧರಿಸುವಂತೆ ತಿಳಿಸಿದೆ.