ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ : ಸುಟ್ಟು ಕರಕಲಾದ ಕಾರು

Share the Article

ವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹಿನ್ನೆಲೆಯಲ್ಲಿ ಕಾರು ಸುಟ್ಟು ಕರಕಲಾದ ಘಟನೆ ವಿಟ್ಲ ಸಮೀಪದ ಕೋಡಪದವು ಸರಾವು ಎಂಬಲ್ಲಿ ಮಾ.೧೩ರಂದು ನಡೆದಿದೆ.

ಕೆಲಿಂಜ ನಿವಾಸಿ ಸಿಟ್ರೇನ್ ಪಾಯಸ್ ರವರ ಮಾಲಕತ್ವದ ಕಾರು ಇದಾಗಿದ್ದು, ಅವರು ಬೋಳಂತೂರು ಕಡೆಯಿಂದ ಕೋಡಪದವು ಮೂಲಕ ವಿಟ್ಲ ಕಡೆಗೆ ಬರುತ್ತಿದ್ದ ವೇಳೆ ಕಾರಿನಲ್ಲಿ ಶಬ್ದ ಕೇಳಿಸಿಕೊಂಡಿತ್ತು. ಕೂಡಲೇ ಕಾರನ್ನು ಬದಿಗೆ ಬಂದು ನಿಲ್ಲಿಸಿ ನೋಡುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ನಿನ್ನೆಯಷ್ಟೇ ಕಾರಿನ ದುರಸ್ತಿ ಕಾರ್ಯ ನಡೆದಿತ್ತು ಎನ್ನಲಾಗಿದೆ. ಘಟನೆಯಿಂದಾಗಿ ಕಾರು ಸುಟ್ಟು ಕರಕಲಾಗಿದ್ದು, ಯಾರೀಗೂ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.

Leave A Reply