ಸವಣೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಮ್ಯುನಿಟಿ ಡೆವಲಪ್ಮೆಂಟ್ ವತಿಯಿಂದ ಅರ್ಹ ಕುಟುಂಬಕ್ಕೆ ನಿರ್ಮಿಸಿದ ನೂತನ ಮನೆಯ ಉದ್ಘಾಟನಾ ಕಾರ್ಯಕ್ರಮ

ಸವಣೂರು,ಮಾ 10 : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಮ್ಯುನಿಟಿ ಡೆವಲಪ್ಮೆಂಟ್ ಸವಣೂರು ಹಾಗೂ ಅಲ್ ಮಿಸ್ಬಾಹ್ ಮುಸ್ಲಿಂ ವೆಲ್ ಫೇರ್ ಫೆಡರೇಶನ್ ಬಡಕ್ಕೋಡಿ ಮತ್ತು ದಾನಿಗಳ ಸಹಕಾರದಿಂದ ಬಡಕ್ಕೋಡಿ ಅಲೇಕಿ ಎಂಬಲ್ಲಿ ನಿರ್ಮಿಸಿದ ಮನೆಯ ಉದ್ಘಾಟನಾ ಸಮಾರಂಭ ನಡೆಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಜಾಬಿರ್ ಅರಿಯಡ್ಕ ಉದ್ಘಾಟನೆ ನಡೆಸಿ ಕಾರ್ಯಕರ್ತರ ಸೇವೆಯನ್ನು ಹಾಗೂ ದಾನಿಗಳ ಸಹಾಯವನ್ನು ಸ್ಮರಿಸಿ ಶ್ಲಾಘಿಸಿ ಸಂಘಟನೆಯು ರಾಷ್ಟ್ರಾದ್ಯಂತ ಕಮ್ಯುನಿಟಿ ಡೆವಲಪ್ಮೆಂಟ್ ನ ಅಧೀನದಲ್ಲಿ ನಡೆಸುತ್ತಿರುವ ಸಾಮಾಜಿಕ ‌ಸೇವೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.


Ad Widget

Ad Widget

Ad Widget

ಬಡಕ್ಕೋಡಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಅರ್ತಿಕೆರೆ ರವರು ಫಲಾನುಭವಿ ಮಹಿಳೆಗೆ ಮನೆಯ ಕೀ ಹಸ್ತಾಂತರ ಮಾಡಿದರು.

ಬಡಕ್ಕೋಡಿ ಮಸೀದಿ ಖತೀಬರಾದ ಗಫೂರ್ ಆಸಹದಿ ರವರು ದುವಾಃ ನೆರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಅಲ್‌ ಮಿಸ್ಬಾಹ್ ಮುಸ್ಲಿಂ ವೆಲ್ ಫೇರ್ ಫೆಡರೇಶನ್ ಬಡಕ್ಕೋಡಿ ಇದರ‌ ಅಧ್ಯಕ್ಷರಾದ ಎಸ್ ಎಂ ಶರೀಫ್,ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರು ಮಾತನಾಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮನೆಯ ಕೆಲಸದಲ್ಲಿ ಸಹಕರಿಸಿದ ಅಬ್ಬಾಸ್ ಅಲೇಕಿ‌ ಮತ್ತು ಫಝಲ್ ಸಮಹಾದಿ ಯವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪಿಎಫ್ಐ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ, ಜಿಲ್ಲಾ ಸಮಿತಿ ಸದಸ್ಯರಾದ ಎಂ ಎಸ್ ರಫೀಕ್, ಸವಣೂರು ಡಿವಿಷನ್ ಅಧ್ಯಕ್ಷರಾದ ಬಾತಿಷ ಬಡಕೋಡಿ, ಸಿಟಿ ಡಿವಿಷನ್ ಅಧ್ಯಕ್ಷರಾದ ಉಮ್ಮರ್ ಕೂರ್ನಡ್ಕ,
ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಕೆನರಾ ಪಾಪ್ಯುಲರ್ ಫ್ರಂಟ್ ಪುತ್ತೂರು ಕಮ್ಯುನಿಟಿ ಡೆವಲಪ್ಮೆಂಟ್ ಉಸ್ತುವಾರಿ ಅಶ್ರಫ್ ಬಾವು, ಸಮಾಜ ಸೇವಕರಾದ ಬಶೀರ್ ಪರ್ಲಡ್ಕ, ಎಸ್ಡಿಪಿಐ ಸುಳ್ಯ ವಿಧಾನ ಸಭಾ ಕಾರ್ಯದರ್ಶಿ ನಝೀರ್ ಸಿಎ, ಎಸ್ಡಿಪಿಐ ಕುಂಬ್ರ ಬ್ಲಾಕ್ ಕಾರ್ಯದರ್ಶಿ ಅಶ್ರಫ್ ಬಡಕೋಡಿ ಪಿಎಫ್ಐ ಸವಣೂರು ಏರಿಯಾ ಅಧ್ಯಕ್ಷರಾದ ಇರ್ಷಾದ್ ಸವಣೂರು ಉಪಸ್ಥಿತರಿದ್ದರು.

ರಫೀಕ್‌ ಎಂ.ಎ ಪ್ರಾಸ್ತಾವಿಕ ಭಾಷಣಗೈದರು,ನಿಝಾಮ್ ಸರ್ವೆ ಕಾರ್ಯಕ್ರಮ ನಿರೂಪಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ವ್ಯಾಪ್ತಿಯಲ್ಲಿ ವಹಿಸಿಕೊಂಡಿರುವ ಒಟ್ಟು 8 ಮನೆಗಳ ನಿರ್ಮಾಣ ಕಾಮಗಾರಿಯಲ್ಲಿ ಮೂರು ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಂದೆ ಎಂದು ಪಾಪ್ಯುಲರ್ ಫ್ರಂಟ್ ಕಮ್ಯುನಿಟಿ ಡೆವಲಪ್ಮೆಂಟ್ ನ ಪುತ್ತೂರು ಉಸ್ತುವಾರಿ ಯಾಗಿರುವ ಅಶ್ರಫ್ ಬಾವು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

error: Content is protected !!
Scroll to Top
%d bloggers like this: