ಕಾಂಗ್ರೆಸ್ ಕಥೆ ಮುಗೀತಲ್ಲಾ, ಖಾದರ್ ಅವರೇ, ಜೈ ಶ್ರೀರಾಮ್ | ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಘೋಷಣೆ

0 13

ಬೆಂಗಳೂರು : ವಿಧಾನಸಭೆಯಲ್ಲಿ ಕಲಾಪ ಆರಂಭ ಆಗುತ್ತಿದ್ದಂತೆಯೇ ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರತಿಧ್ವನಿಸಿದೆ. ಕಲಾಪದಲ್ಲಿ ವಿಪಕ್ಷ ಉಪನಾಯಕ ಯು ಟಿ ಖಾದರ್ ಅವರು ಎದ್ದು ನಿಂತು ಮಾತನಾಡಲು ಮುಂದಾದ ವೇಳೆ, ” ಖಾದರ್ ಅವರೇ ಕಾಂಗ್ರೆಸ್ ಕಥೆ ಮುಗೀತಲ್ಲಾ, ಜೈ ಶ್ರೀರಾಮ್” ಎಂದು ಬಿಜೆಪಿ ಸದಸ್ಯರು ಹೇಳಿದ ಘಟನೆ ನಡೆದಿದೆ.

ಈ ವೇಳೆ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಲು ಮುಂದಾದರು. ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಈಶ್ವರಪ್ಪ ಅಂತೂ ಸಿಎಂ ಆಗಲ್ಲ, ಯಾಕೆ ಇಷ್ಟು ಮಾತನಾಡುತ್ತಾರೋ ಎಂದರು. ಈ ವೇಳೆ ಸದನದಲ್ಲಿ ‘ ಜೈ ಹನುಮಾನ್’ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.

Leave A Reply