ಯಾರೂ ಕಂಡುಕೇಳರಿಯದ ವಿಚಿತ್ರ ಆಕಾರದ ಮೊಟ್ಟೆ ಇಟ್ಟ ಕೋಳಿ !! | ಈ ಮೊಟ್ಟೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಫೇಮಸ್ಸೇ ಫೇಮಸ್ಸು

ಕೋಳಿ ಮೊಟ್ಟೆ ಆಹಾರ ಪ್ರಿಯರ ಇಷ್ಟದ ತಿನಿಸು. ಎಗ್ ಆಮ್ಲೆಟ್, ಎಗ್ ಬುರ್ಜಿ ಮುಂತಾದ ರುಚಿಕರ ಖಾದ್ಯಗಳನ್ನು ಮಾಡಿ ತಿನ್ನುವವರಿದ್ದಾರೆ. ಮೊಟ್ಟೆಗಳಲ್ಲಿ ಎರಡು ರೀತಿಯ ಮೊಟ್ಟೆಗಳನ್ನು ನೀವು ನೋಡಿರಬಹುದು. ಒಂದು ಬಿಳಿಯದ್ದು, ಇನ್ನೊಂದು ಕಂದು ಬಣ್ಣದ್ದು. ಹಾಗೆಯೇ ಗಾತ್ರದಲ್ಲೂ ಕೂಡ ವ್ಯತ್ಯಾಸ ಇರುವ ಮೊಟ್ಟೆಗಳನ್ನು ನೋಡಿದ್ದೇವೆ. ಕೆಲವು ಮೊಟ್ಟೆಗಳು ಊಹಿಸಿದಕ್ಕಿಂತ ದೊಡ್ಡದಾಗಿರುತ್ತವೆ. ಹಾಗೇ ಕೆಲವೊಂದು ಸಣ್ಣದಾಗಿಯೂ ಇರುತ್ತವೆ. ಏನೇ ಇರಲಿ, ಆದರೆ ಎಲ್ಲಾ ಮೊಟ್ಟೆಗಳು ದುಂಡಾಗಿರುತ್ತವೆ ಮತ್ತು ಸ್ವಲ್ಪ ಉದ್ದವಾಗಿರುತ್ತವೆ.

ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮೊಟ್ಟೆ ಚಿತ್ರವನ್ನು ನೋಡಿದರೆ, ಒಮ್ಮೆ ನಿಮ್ಮ ಕಣ್ಣಗಳನ್ನು ನೀವೇ ನಂಬುವುದಿಲ್ಲ. ಹೌದು, ಕೋಳಿಯೊಂದು ವಿಚಿತ್ರ ಆಕಾರದ ಮೊಟ್ಟೆ ಇಟ್ಟಿರುವ ಪ್ರಸಂಗ ಆಂಧ್ರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಪೂರ್ವ ಗೋದಾವರಿ ಜಿಲ್ಲೆಯ ವಿಆರ್ ಪುರಂ ವಲಯದ ರಾಜುಪೇಟ ಕಾಲನಿಯಲ್ಲಿ ಮಂಜಪು ಸತ್ಯನಾರಾಯಣ ಎಂಬುವರು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ, ಅವರಿಗೆ ಎಲ್ಲ ದಿನಗಳಂತೆ ಕಳೆದ ಭಾನುವಾರ ಇರಲಿಲ್ಲ. ಏಕೆಂದರೆ ಆ ದಿನ ಅಚ್ಚರಿಯೊಂದು ಎದುರಾಗಿದೆ.

ಕೋಳಿಗಳು ಇಟ್ಟ ಮೊಟ್ಟೆಯನ್ನು ಭಾನುವಾರ ತೆಗೆದುಕೊಳ್ಳುವಾಗ ಒಂದು ವಿಚಿತ್ರ ಆಕಾರದ ಮೊಟ್ಟೆಯನ್ನು ಸತ್ಯನಾರಾಯಣ ಅವರು ನೋಡಿದ್ದಾರೆ. ಅದನ್ನು ನೋಡಿ ಒಂದು ಕ್ಷಣ ಅವರು ದಂಗಾಗಿದ್ದಾರೆ. ಇದೇನು ಮೊಟ್ಟೆಯಾ ಅಥವಾ ಬೇರೆ ಏನಾದರೂ ಇರಬಹುದಾ ಎಂಬ ಗೊಂದಲಕ್ಕೆ ಸತ್ಯನಾರಾಯಣ ಒಳಗಾಗಿದ್ದರು. ಆದರೆ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಮೊಟ್ಟೆ ಎಂಬುದು ಸ್ಪಷ್ಟವಾಗಿದೆ. ಮೊಟ್ಟೆ ವಿಚಿತ್ರ ಆಕಾರದಲ್ಲಿದ್ದು, ಸದ್ಯ ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೋಳಿಯು ಈ ರೀತಿ ವಿಚಿತ್ರ ಆಕಾರದಲ್ಲಿ ಮೊಟ್ಟೆ ಇಡಲು ಅನುವಂಶಿಕ ದೋಷಗಳು ಎಂದು ಪರಿಣಿತ ಹೇಳಿದ್ದಾರೆ. ಆದರೂ ಇದೇ ಮೊದಲ ಬಾರಿಗೆ ಈ ರೀತಿಯ ಮೊಟ್ಟೆಯನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಂತೂ ನಿಜ.

Leave A Reply

Your email address will not be published.