‘ಉಕ್ರೇನ್ ನಡುವಿನ ಯುದ್ಧ ನಿಲ್ಲಲಿ ಭಾರತೀಯರು ಸುರಕ್ಷಿತವಾಗಿ ದೇಶ ತಲುಪಲಿ’ಎಂದು ಬಾಳೆಹಣ್ಣಿನಲ್ಲಿ ಬರೆದು ದೇವರ ಮೊರೆ ಹೋದ ಭಕ್ತ

ತುಮಕೂರು : ಉಕ್ರೇನ್ ರಷ್ಯಾ ದಾಳಿಯಿಂದ ಕಂಗೆಟ್ಟಿಹೋಗಿದ್ದು, ಬಾಂಬ್ ದಾಳಿಯಿಂದಾಗಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.ಇಂತಹ ಸಂಕಷ್ಟ ಸ್ಥಿತಿಯಲ್ಲಿ ನಮ್ಮ ಭಾರತೀಯರು ಯುದ್ಧದ ಸ್ಥಳದಲ್ಲಿ ಇದ್ದು,ಸಾವನ್ನಪ್ಪುತ್ತಿದ್ದಾರೆ.

ಹೀಗಾಗಿ ಉಕ್ರೇನ್ ಮೇಲೆ ರಷ್ಯಾ ವ್ಯಾಪಕ ದಾಳಿ ನಿಲ್ಲಲಿ, ಭಾರತೀಯರು ಸುರಕ್ಷಿತವಾಗಿ ದೇಶ ತಲುಪಲಿ ಎಂದು ಭಕ್ತರೊಬ್ಬರು ದೇವರ ಮೊರೆ ಹೋಗಿದ್ದಾರೆ.ಹೌದು.ಬುಧವಾರ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ತುಮಕೂರು ಜಿಲ್ಲೆ ಗುಬ್ಬಿ
ತಾಲೂಕಿನ ಅಳಿಲುಘಟ್ಟದ ಭಕ್ತಾದಿ ಪರಮೇಶ ಎಂಬುವರು ಶೀಘ್ರ ಯುದ್ಧ ನಿಲ್ಲಲಿ ಎಂದು ದೇವರ ಮೊರೆ ಹೋಗಿದ್ದಾರೆ.

ವಾಡಿಕೆಯಂತೆ ಪ್ರತಿವರ್ಷವೂ ತುಮಕೂರಿನ ಸಿದ್ದಗಂಗಾ
ಮಠದ ರಥೋತ್ಸವಕ್ಕೆ ಪಾಲ್ಗೊಳ್ಳುವ ಪರಮೇಶ್ ಅವರು ಈ ವರ್ಷವೂ ಸಹ ರಥೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ಇಷ್ಟಾರ್ಥ ನೆರವೇರಿಸಲು ರಥಕ್ಕೆ ಬಾಳೆಹಣ್ಣು ಎಸಿಯೋ ವಾಡಿಕೆ ಇದ್ದು ಅದರಂತೆ ಪರಮೇಶ್ ಬಾಳೆಹಣ್ಣಿನ ಮೇಲೆ
ಯುದ್ಧ ನಿಲ್ಲಲಿ ಎಂದು ಬರೆದು ರಥಕ್ಕೆ ಎಸೆಯುವ ಮೂಲಕ ಇಷ್ಟಾರ್ಥ ನೆರವೇರಲಿ ಎಂದು ದೇವರ ಮೊರೆ ಹೋಗಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಪರಮೇಶ್,ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ನಿಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.ವಿದ್ಯಾಭ್ಯಾಸಕ್ಕಾಗಿ ನಮ್ಮ ದೇಶದಿಂದ ಉಕ್ರೇನ್ ಗೆ ತೆರಲಿರುವ ವಿದ್ಯಾರ್ಥಿಗಳು ಕ್ಷೇಮವಾಗಿ ದೇಶಕ್ಕೆ ಹಿಂತಿರುಗುವಂತೆ ಆಗಲಿ ಇದಕ್ಕೆ ಸಂಬಂಧಿಸಿದಂತೆ ಎಲ್ಲರೂ ಸಹಕರಿಸಿ ಶ್ರೀಘ್ರದಲ್ಲೇ ಎಲ್ಲರೂ ದೇಶಕ್ಕೆ ಮರಳುವಂತಾಗಲಿ ಎಂದಿದ್ದಾರೆ.ಉಕ್ರೇನ್ ನಲ್ಲಿ ಅತಿ ಕಡಿಮೆ ಬೆಲೆಗೆ ವೈದ್ಯಕೀಯ ಶಿಕ್ಷಣ ದೊರಕುತ್ತಿದ್ದು ಅದರಂತೆ ನಮ್ಮ ದೇಶದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹೋಗಿದ್ದಾರೆ ಆದರೆ ಇಂಥ ಸಮಯದಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ ಹಾಗಾಗಿ ಯಾರಿಗೂ ತೊಂದರೆಯಾಗದಂತೆ ಎಲ್ಲರೂ ಕ್ಷೇಮವಾಗಿ ದೇಶಕ್ಕೆ ಹಿಂತಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.

Leave A Reply

Your email address will not be published.