ಹೊಸ ಸಿಮ್ ಕಾರ್ಡ್ ಖರೀದಿಸಲು ಟೆಲಿಕಾಂ ಇಲಾಖೆ ಹೊಸ ಆದೇಶ!

ಟೆಲಿಕಾಂ ಇಲಾಖೆ ಹೊಸ ಆದೇಶ ಹೊರಡಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರದ ಈ ಕ್ರಮ ಕೈಗೊಳ್ಳಲಾಗಿದೆ. ತಿದ್ದುಪಡಿ ಮಾಡಿದ ನಿಯಮದ ಮಾಹಿತಿ ಇಲ್ಲಿದೆ ನೋಡಿ

ಈಗ ಹೊಸ ನಿಯಮದ ಪ್ರಕಾರ, UIDAI ಆಧಾರಿತ ಪರಿಶೀಲನೆಯ ಮೂಲಕ ಗ್ರಾಹಕರು ತಮ್ಮ ಮನೆಯಲ್ಲಿ ಸಿಮ್ ಪಡೆಯಬಹುದು. ಆಯಪ್/ಪೋರ್ಟಲ್ ಆಧಾರಿತ ಪ್ರಕ್ರಿಯೆಯ ಮೂಲಕ ಗ್ರಾಹಕರಿಗೆ ಮೊಬೈಲ್ ಸಂಪರ್ಕವನ್ನು ನೀಡಲಾಗುವುದು, ಇದರಲ್ಲಿ ಗ್ರಾಹಕರು ಮನೆಯಲ್ಲಿ ಕುಳಿತು ಮೊಬೈಲ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು DoT ತನ್ನ ಆದೇಶದಲ್ಲಿ ತಿಳಿಸಿದೆ.

ಟೆಲಿಕಾಂ ಇಲಾಖೆಯ ಹೊಸ ನಿಯಮಗಳ ಪ್ರಕಾರ, ಈಗ ಕಂಪನಿಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವಂತಿಲ್ಲ. ಇದಲ್ಲದೆ, ಒಬ್ಬ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದರೆ, ಅಂತಹ ವ್ಯಕ್ತಿಗೂ ಹೊಸ ಸಿಮ್ ಕಾರ್ಡ್ ನೀಡಲಾಗುವುದಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿ, ಅಂತಹ ವ್ಯಕ್ತಿಗೆ ಸಿಮ್ ಮಾರಾಟ ಮಾಡಿದರೆ, ಸಿಮ್ ಮಾರಾಟ ಮಾಡಿದ ಟೆಲಿಕಾಂ ಕಂಪನಿಯನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ.

Leave A Reply

Your email address will not be published.