ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಸಾರ್ವಕಾಲಿಕ ಏರಿಕೆ| ಮುಂದಿನವಾರದಲ್ಲಿ ತೈಲ ಬೆಲೆ ಏರಿಕೆ ಸಾಧ್ಯತೆ !

ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿರುವ ಕಾರಣ ಇನ್ನೊಂದು ವಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತುಟ್ಟಿಯಾಗುವುದು ಖಂಡಿತ.

ಪೆಟ್ರೋಲ್, ಡೀಸೆಲ್ ದರ ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಏರಿಕೆ ಕಾಣಬಹುದು ಎಂದು ಹೇಳಲಾಗುತ್ತಿದೆ.

ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ.,( ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ( ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೊಲಿಯಂ ಕಾರ್ಪೋರೇಷನ್ ಲಿ.,( ಎಚ್ ಪಿಸಿಎಲ್) ಮೂಲಗಳ ಪ್ರಕಾರ ಪ್ರತಿ ಲೀಟರ್ ಗೆ 5.7 ರೂ ನಷ್ಟ ಆಗುತ್ತಿದೆ.

ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 113 ಡಾಲರ್ ದಾಟಿದ್ದು, ನೈಸರ್ಗಿಕ ಅನಿಲ ದರವೂ ಗಗನಮುಖಿಯಾಗಿದೆ.

ಯುರೋಪ್ ತೈಲ ಮಾರುಕಟ್ಟೆ ಬ್ರೆಂಟ್ ನಾರ್ತ್ ಆಯಿಲ್ ನಲ್ಲಿ ಬ್ಯಾರೆಲ್ ಬೆಲೆ 113.02 ಡಾಲರ್ ಆಗಿದೆ. 2014 ರಿಂದೀಚೆಗೆ ಇದು ಸಾರ್ವಕಾಲಿಕ ಗರಿಷ್ಠ ದರವಾಗಿ ದಾಖಲಾಗಿದೆ.

ನ್ಯೂಯಾರ್ಕ್‌ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಪ್ರತಿಬ್ಯಾರೆಲ್ ಗೆ 111.50 ಡಾಲರ್ ಆಗಿದ್ದು, 2013 ರ ನಂತರ ಇದೇ ಗರಿಷ್ಠ ದರ ಎಂದು ದಾಖಲಾಗಿದೆ.

Leave A Reply

Your email address will not be published.