ಹಣ್ಣುಗಳ ಮೇಲೆ ಏಕೆ ಈ ರೀತಿಯ ಸ್ಟಿಕ್ಕರ್ ಅಂಟಿಸಿರುತ್ತಾರೆ ಗೊತ್ತಾ ? ಹಣ್ಣು ತಿನ್ನುವ ಎಲ್ಲರೂ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ!!!

ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಲ್ಲರಿಗೂ ತಿಳಿದ ವಿಷಯ. ನೀವು ಗಮನಿಸಿರಬಹುದು ಮಾರುಕಟ್ಟೆಯಿಂದ ಹಣ್ಣುಗಳನ್ನು ತಂದಾಗ, ಕೆಲವು ಹಣ್ಣುಗಳ ಮೇಲೆ ಸ್ಟಿಕ್ಕರ್ ಇರುವುದನ್ನು ನೀವು ಗಮನಿಸಿರಬಹುದು. ಈ ಸ್ಟಿಕ್ಕರ್ ಗಳನ್ನು ಯಾಕೆ ಹಾಕ್ತಾರೆ ಎಂದು ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ? ಹಣ್ಣಿನ ಮೇಲೆ ಹಣ್ಣು ಲೇಬಲ್ ಗಳನ್ನು ಹಾಕುವುದರ ಅರ್ಥ ಏನು ಅನ್ನುವುದನ್ನು ನಾವು ಇಲ್ಲಿ ತಿಳಿಯೋಣ.

ಹಣ್ಣುಗಳ ಮೇಲಿನ ಸ್ಟಿಕ್ಕರ್ ಗಳು ಅವುಗಳ ಗುಣಮಟ್ಟದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ. ಯಾವ ಹಣ್ಣುಗಳನ್ನು ಖರೀದಿಸಬೇಕು ಮತ್ತು ಯಾವ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸುತ್ತದೆ. ಹಣ್ಣುಗಳ ಮೇಲೆ ಸ್ಟಿಕ್ಕರ್ ಬಗ್ಗೆಯೂ ಕಾಳಜಿ ವಹಿಸುವ ಅಗತ್ಯವಿರುತ್ತದೆ.

ಹಣ್ಣಿನ ಸ್ಟಿಕ್ಕರ್ ನಲ್ಲಿ ಹಣ್ಣಿನ ಕೋಡ್ ನ್ನು ನೀಡಲಾಗುತ್ತದೆ. ಇದನ್ನು PLU ಎಂದು ಕರೆಯಲಾಗುತ್ತದೆ. ಅಂದರೆ Price Look Up ಪ್ರತಿಯೊಂದು ಕೋಡಿಗೂ ಒಂದೊಂದು ಅರ್ಥವಿದೆ.

3 ಅಥವಾ 4 ಅಂಕೆಯ ನಂಬರ್ ಇದ್ದರೆ…

ಹಣ್ಣುಗಳ ಮೇಲೆ ಹಾಕುವ ಸ್ಟಿಕರ್ಸ್ ಮೇಲೆ 3 ಅಥವಾ 4 ರಿಂದ ಪ್ರಾರಂಭವಾದರೆ ಆಗ ಆ ಹಣ್ಣುಗಳನ್ನು ಕೃತಕ ರಾಸಾಯನಿಕಗಳು, ಸಹಜಸಿದ್ಧವಾದ ಗೊಬ್ಬರ ಹಾಕಿ ಬೆಳೆಸಿದ್ದಾರೆ ಎಂದು ತಿಳಿಸುತ್ತದೆ. ಸಾಮಾನ್ಯವಾಗಿ ಅಂತಹ ಸ್ಟಿಕ್ಕರ್ ಗಳು ಇರುವ ಹಣ್ಣನ್ನು 20 ನೇ ಶತಮಾನದಲ್ಲಿ ಕೃಷಿಯಲ್ಲಾದ ಕ್ರಾಂತಿಕಾರಿ ಬದಲಾವಣೆಗಳ ಆಧಾರವಾಗಿ, ಪದ್ಧತಿಗಳನ್ನು ಉಪಯೋಗಿಸಿ ಬೆಳೆಸಿದ್ದಾರೆ ಎಂದು ಅರ್ಥ. ಸ್ಟಿಕ್ಕರ್ ನಲ್ಲಿ ನಾಲ್ಕು ಅಂಕಿಯ ಕೋಡ್ ಇದ್ದರೆ ಆ ಹಣ್ಣುಗಳನ್ನು ಬೆಳೆಯುವಾಗ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸಲಾಗಿದೆ ಎಂದು ಅರ್ಥ.

5 ಅಂಕೆಯ ಕೋಡ್ ಇದ್ದರೆ…

ಒಂದು ಹಣ್ಣಿನಲ್ಲಿ 8 ನಂಬರಿನಿಂದ ಆರಂಭವಾಗುವ 5 ಅಂಕೆಯ ಕೋಡ್ ಇದ್ದರೆ, ಆ ಹಣ್ಣನ್ನು ಸಾವಯವ ರೂಪದಿಂದ ಬೆಳೆಸಲಾಗಿದೆ ಎಂದರ್ಥ. ಈ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಬಹುದು ಎಂಬುದಾಗಿ ಅರ್ಥ.

ಸಂಖ್ಯೆ 7 ರಿಂದ ಪ್ರಾರಂಭವಾಗುವ ಕೋಡ್ ನ ಅರ್ಥ…

ಒಂದು ಹಣ್ಣಿನಲ್ಲಿ 7 ನಂಬರಿನಿಂದ ಆರಂಭವಾಗುವ 5 ಅಂಕೆಗಳ ಕೋಡ್ ಇದ್ದರೆ, ಇದರರ್ಥ ಹಣ್ಣನ್ನು ಸಾವಯವ ರೂಪದಿಂದ ಬೆಳೆಸಲಾಗಿದೆ. ಆದರೆ ಈ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಲಾಗುವುದಿಲ್ಲ ಎಂದು.

8 ಅಂಕೆಯ ನಂಬರ್ ಇದ್ದರೆ …

ಹಣ್ಣುಗಳ ಮೇಲೆ ಐದಂಕಿ ನಂಬರ್ ಇದ್ದು, ಅದು 8 ರಿಂದ ಆರಂಭವಾದರೆ ಆಗ ಆ ಹಣ್ಣುಗಳನ್ನು ಕುಲಾಂತರಿ ತಳಿಯಿಂದ ಬೆಳೆದಿದ್ದಾರೆಂದು ತಿಳಿದುಕೊಳ್ಳಬೇಕು. ಈ ರೀತಿಯ ಹಣ್ಣುಗಳನ್ನು ಯಾವುದೇ ಕಾರಣಕ್ಕೂ‌ ತಿನ್ನಬಾರದು. ಇವು ತುಂಬಾ ಅಪಾಯಕಾರಿ. ಅನಾರೋಗ್ಯಗಳನ್ನು ಉಂಟು ಮಾಡುತ್ತದೆ.

9 ಅಂಕೆಯ ನಂಬರ್ ಇದ್ದರೆ…

ಹಣ್ಣುಗಳ ಮೇಲೆ ಹಾಕುವ ಸ್ಟಿಕರ್ ಮೇಲೆ ಐದಂಕಿ ನಂಬರ್ ಇದ್ದು ಅದು 9 ರಿಂದ ಪ್ರಾರಂಭವಾದರೆ ಆಗ ಆ ಹಣ್ಣುಗಳು ಸಾವಯವ ಗೊಬ್ಬರ ಬಳಸಿ ಅತ್ಯಂತ ಸಹಜ ಸಿದ್ಧವಾದ ಪದ್ಧತಿಯಲ್ಲಿ ಬೆಳೆದಿದ್ದಾರೆಂದು ಅರ್ಥ. ಇವು ನಮ್ಮ ದೇಹಕ್ಕೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಲ್ಲ. ಸ‌ಂಪೂರ್ಣ ಸುರಕ್ಷಿತ.

Leave A Reply

Your email address will not be published.