ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲು

ಮಂಗಳೂರು:ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಕೆಂಪು ಕೋಟೆಯಲ್ಲಿ ಭಗವಧ್ವಜ ಹಾರಾಟ ಹೇಳಿಕೆ, ವಿಧಾನ ಮಂಡಲದ ಅಧಿವೇಶನವನ್ನೇ ಬಲಿ ತೆಗೆದುಕೊಂಡಿದ್ದು, ಇದೀಗ ಸಾಥ್ ಎಂಬತೆ ಬಿಜೆಪಿಯ ಇನ್ನೋರ್ವ ಶಾಸಕ ಈ ವಿಚಾರದಲ್ಲಿ ವಿವಾದೀತ ಹೇಳಿಕೆಯನ್ನು ನೀಡಿದ್ದಾರೆ.

ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಫೆ. 28 ರಂದು
ನಡೆದ ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜಾರ ಭಾಷಣದ ತುಣುಕುಗಳು ಈಗ ವೈರಲ್ ಆಗಿವೆ.

“ಕಾಂಗ್ರೆಸ್ ನಾಯಕರ ಷಡ್ಯಂತ್ರದಿಂದ ಹಿಂದೂ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ. ಕಾಂಗ್ರೆಸ್ಸಿನ ಕುಮ್ಮುಕ್ಕಿನಿಂದಲೇ ಈ ಕೊಲೆ ನಡೆದಿದೆ ಎಂದು ನಾನು ನೇರವಾಗಿ ಆರೋಪವನ್ನು ಮಾಡುತ್ತೇನೆ”ಎಂದು ಹರೀಶ್ ಪೂಂಜಾ ಆರೋಪಿಸಿದರು.”ಹಿಂದೂ ಸಮಾಜದ ರಕ್ಷಣೆಗೋಸ್ಕರ ಹರ್ಷನಂತಹ ಕೋಟ್ಯಂತರ ಜನ ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬಂದು ಸಮಾಜಘಾತಕ ಶಕ್ತಿಗಳ ವಿರುದ್ದ ಹೋರಾಡುತ್ತಾರೆ. ಈಶ್ವರಪ್ಪನವರ ಹೇಳಿಕೆಯಿಂದಾಗಿ ಅಧಿವೇಶನವನ್ನು ಮೊಟಕುಗೊಳಿಸಲಾಯಿತು”ಎಂದು ಹರೀಶ್ ಪೂಂಜಾ ಹೇಳಿದರು.

“ಕೆಂಪು ಕೋಟೆಯಲ್ಲಿ ಭಗವಧ್ವಜವನ್ನು ಹಿಂದೂ ಸಮಾಜ ಹಾರಿಸಿಯೇ ತೀರುತ್ತದೆ, ಆದರೆ ಅದು ರಾಷ್ಟ್ರಧ್ವಜದ ಕೆಳಗೆ ಭಗವಧ್ವಜವನ್ನು ಹಾರಿಸುತ್ತೇವೆ. ಇದನ್ನು ತಪ್ಪಿಸಲು ಯಾವ ಪಕ್ಷಕ್ಕೂ ಸಾಧ್ಯವಿಲ್ಲ, ಬಿಜೆಪಿ ಆ ಕೆಲಸವನ್ನು ಮಾಡುತ್ತದೆ”ಎಂದು ಹರೀಶ್ ಪೂಂಜಾ ವಿವಾದಕಾರೀ ಹೇಳಿಕೆಯನ್ನು ನೀಡಿದ್ದಾರೆ.”ಭಗವಧ್ವಜ ಇಂದು ನಿನ್ನೆಯದಲ್ಲ, ಈ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಬಾಲಗಂಗಾಧರ ತಿಲಕ್ ಅವರು ಭಗವಧ್ವಜವನ್ನು ಮುಂದಿಟ್ಟು ಕೊಂಡು ಹೋರಾಡಿದರು. ಶಿವಾಜಿಯ ಮತ್ತು ಅರ್ಜುನನ ರಥದಲ್ಲೂ ಭಗವಧ್ವಜವಿತ್ತು”ಎಂದು ಶಾಸಕ ಹರೀಶ್ ಪೂಂಜಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಆದರೆ ಶಾಸಕ ಹರೀಶ್ ಪೂಂಜಾರ ಮಾತುಗಳಿಗೆ ಬೆಳ್ತಂಗಡಿ ಯುವ ಕಾಂಗ್ರೆಸ್ ವಿರೋಧ ವ್ಯಕ್ತ ಪಡಿಸಿದ್ದು,ಇದೊಂದು ಸಂವಿಧಾನ ವಿರೋಧಿಯಾಗಿದ್ದು,ರಾಷ್ಟ್ರಧ್ವಜಕ್ಕೆ ಅವಮಾನವಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಹೇಳಿದೆ.ರಾಷ್ಟ್ರಧ್ವಜಕ್ಕೆ ಅವಮಾನವಾಗುವಂತೆ ಉದ್ರೇಕಕಾರಿ ಭಾಷಣ ಮಾಡಿ, ದೆಹಲಿಯ ಕೆಂಪುಕೋಟೆಯಲ್ಲಿ ಭಗವಾಧ್ವಜವನ್ನು
ಹಾರಿಸುತ್ತೇವೆ.ಜೊತೆಗೆ ತ್ರಿವರ್ಣ ಧ್ವಜದ ಕೆಳಗೆ
ಭಗವಾಧ್ವಜವನ್ನು ಹಾರಿಸುತ್ತೇವೆ ಎಂದು
ದೇಶದ್ರೋಹಿ ಹೇಳಿಕೆ ನೀಡಿದ್ದಾರೆ ಎಂದು
ಆರೋಪಿಸಿ ಬೆಳ್ತಂಗಡಿ ಯುವ ಕಾಂಗ್ರೆಸ್ (ನಗರ)
ಅಧ್ಯಕ್ಷ ಅನಿಲ್ ಪೈ ಅವರು ಬೆಳ್ತಂಗಡಿ ಪೋಲಿಸ್
ಠಾಣೆಗೆ ದೂರು ನೀಡಿದ್ದಾರೆ.

Leave A Reply

Your email address will not be published.