ಕ್ರಿಕೆಟ್ ಅಂಗಳದಲ್ಲಿ ‘ಪುಷ್ಪಾ’ ಸಿನಿಮಾದ ಸ್ಟೈಲ್ ಮಾಡಿದ ಜಡೇಜಾ : ಲಂಕಾ ವಿರುದ್ಧದ ಟಿ 20 ಪಂದ್ಯದಲ್ಲಿ ವಿಕೆಟ್ ಕಬಳಿಸಿದಾಗ ಮೂಡಿದ ಸ್ಟೈಲ್

ಲಖನೌ : 3 ತಿಂಗಳ ಬಳಿಕ ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿದ್ದಾರೆ. ಗುರುವಾರ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ಸಮಯದಲ್ಲಿ ಮರಳಿ ಬಂದ ಜಡೇಜಾ, ಈ ವೇಳೆ ಜನಪ್ರಿಯ ಸಿನಿಮಾ ‘ ಪುಷ್ಪ’ ಸ್ಟೈಲ್ ನಲ್ಲಿ ಗಡ್ಡ ನೇವರಿಸುವ ಮೂಲಕ ಆಕರ್ಷಿಸಿದ್ದಾರೆ.

ಶ್ರೀಲಂಕಾ ಇನ್ನಿಂಗ್ಸ್ ನ 10 ನೇ ಓವರ್ ನಲ್ಲಿ ಬ್ಯಾಟರ್ ದಿನೇಶ್ ಚಾಂಡಿಮಲ್ ವಿಕೆಟ್ ತಗೊಂಡಾಗ ‘ ಬಗ್ಗೋದೆ ಇಲ್ಲ’ ಎಂಬ ಸನ್ನೆಯ ರೀತಿಯಲ್ಲಿ ಗಡ್ಡ ನೇವರಿಸಿ, ‘ ಪುಷ್ಪ’ ಸಿನಿಮಾದ ಹೀರೋ ಅಲ್ಲು ಅರ್ಜುನ್ ರೀತಿ ಮಿಂಚಿದ್ದಾರೆ.

ಜಡೇಜಾ ಪುಷ್ಪ ಸಿನಿಮಾದ ರೀತಿಯ ಆ್ಯಕ್ಟಿಂಗ್ ಮಾಡಿರುವುದು ಇದೇ ಮೊದಲಲ್ಲ. ಈ ಮೊದಲು ಟ್ವಿಟ್ಟರ್ ನಲ್ಲಿ ಸಿನಿಮಾದ ಹೀರೋ ರೀತಿಯಲ್ಲೇ ಬೀಡಿಯ‌ನ್ನು ಬಾಯಲ್ಲಿಟ್ಟುಕೊಂಡು ಫೋಸ್ ನೀಡಿದ್ದರು. ಈಗ ಈ ‘ತಗ್ಗದೆಲೇ’ ಡೈಲಾಗ್ ನೊಂದಿಗೆ ಗಡ್ಡ ನೇವರಿಸುವ ವೀಡಿಯೋ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Leave A Reply

Your email address will not be published.