ಬಾರ್‌ನಲ್ಲಿ ಗಲಾಟೆ : ಇಬ್ಬರಿಗೆ ಚೂರಿ ಇರಿತ

Share the Article

ಬಂಟ್ವಾಳ: ಬಾರೊಂದರಲ್ಲಿ ಕುಡಿದು ಕ್ಷುಲಕ ಕಾರಣಕ್ಕೆ ಜಗಳ ಮಾಡಿಕೊಂಡು ಬಳಿಕ ಇರಿತಕ್ಕೊಳಗಾಗಿ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿ ಫೆ. 9ರಂದು ನಡೆದಿದೆ.

ಯಾವುದೋ ಕ್ಷುಲಕ ಕಾರಣಕ್ಕೆ ಯುವಕರ ಮಧ್ಯೆ ಜಗಳ ನಡೆದಿದ್ದು, ಈ ವೇಳೆ ಚೂರಿಯಿಂದ ಇರಿದುಕೊಂಡಿದ್ದಾರೆ.

ಇರಿತದ ಪರಿಣಾಮ ಕಿಶೋರ್ ಹಾಗೂ ದಯಾನಂದ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಕರಣದ ಆರೋಪಿಗಳಾದ ಅರ್ಬಿಗುಡ್ಡೆ ನಿವಾಸಿಗಳಾದ ಸುಚಿತ್, ಸಚಿನ್, ಧನು ಹಾಗೂ ಪುರುಷೋತ್ತಮ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಪತ್ತೆಗಾಗಿ ಬಂಟ್ವಾಳ ನಗರ ಪೊಲೀಸರು ಬಲೆ ಬೀಸಿದ್ದಾರೆ.

Leave A Reply