ಒಂದಲ್ಲ ಎರಡಲ್ಲ‌ ಬರೋಬ್ಬರಿ 78 ಬಾರಿ ಕೊರೊನಾ ಪಾಸಿಟಿವ್ ಗೆ ಒಳಗಾದ ವ್ಯಕ್ತಿ | 14 ತಿಂಗಳಿನಿಂದ ಕ್ವಾರಂಟೈನ್!!!

ಮನುಷ್ಯನಿಗೆ ಒಂದು ಬಾರಿ ಕೊರೊನಾ ಬಂದರೆ ಸಾಕು ಇಲ್ಲದ ಕಿರಿಕಿರಿ ಪ್ರಾರಂಭವಾಗುತ್ತದೆ. ಕೊರೊನಾ ಬಂದ ಮೇಲೆ ಶುರುವಾಗುವ ನೋವು ಯಾತನೆ ಇದೆಯಲ್ಲಾ ಅದು ಯಾರಿಗೂ ಬೇಡ. ಉಸಿರಾಟದ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಇತ್ಯಾದಿ ಸಮಸ್ಯೆಗಳು ಬೆಂಬಿಡದೆ ಕಾಡುತ್ತದೆ. ಈ ಕೊರೊನಾದ ಪರಿಣಾಮ ಈ ರೀತಿ ಇರುವಾಗ ಇಲ್ಲೊಬ್ಬ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಮೇಲೆ ಪಾಸಿಟಿವ್ ಬರ್ತಾನೇ ಇದೆಯಂತೆ. ಅದೂ ಒಂದಲ್ಲ ಎರಡಲ್ಲ ಬರೋಬ್ಬರಿ 78 ಬಾರಿ. ಇದು ನಂಬಲು ಅಸಾಧ್ಯ. ಆದರೂ ಇದು ಸತ್ಯ. ಪಾಪ ಈತ ಬರೋಬ್ಬರಿ 14 ತಿಂಗಳಿನಿಂದ ಕ್ವಾರಂಟೈನ್ ನಲ್ಲೇ ಇದ್ದಾನೆ. ಈತ ಯಾರು, ತಿಳಿಯೋಣ ಬನ್ನಿ.

ಟರ್ಕಿ ದೇಶದ ಇಸ್ತಾನ್ ಬುಲ್ ನಲ್ಲಿ ವಾಸಿಸುವ 56 ವರ್ಷದ ಮುಜಾಫರ್ ಕಯಾಸನ್ ಎನ್ನುವವರೇ 78 ಬಾರಿ ಕೊರೊನ ಪಾಸಿಟಿವ್ ಗೆ ಒಳಗಾದ ವ್ಯಕ್ತಿ. ನವೆಂಬರ್ 2020 ರಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದಾಗ ಮೊದಲ ಬಾರಿ ಸೋಂಕಿಗೆ ಒಳಗಾಗಿದ್ದು ತಿಳಿದು ಬಂದಿದೆ.

ಈ ವ್ಯಕ್ತಿಗೆ ಕೊರೊನಾ ಬೆನ್ನುಬಿಡದೆ ಕಾಡುತ್ತಿದೆಯಂತೆ. ಪ್ರತಿ ಬಾರಿ ಪರೀಕ್ಷೆಗೊಳಗಾದಾಗ ಕೋವಿಡ್ ಪಾಸಿಟಿವ್ ಆಗಿದೆ. ಅಂದರೆ 78 ಬಾರಿ. ಹೀಗಾಗಿ ಈತ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಮನೆಯವರ ಜೊತೆ ಇರಲು ಸಾಧ್ಯ ಆಗಲಿಲ್ಲ. 14 ತಿಂಗಳು ಕ್ವಾರಂಟೈನ್ ನಲ್ಲೇ ಇದ್ದಾನೆ ಈ ವ್ಯಕ್ತಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೀವ್ರತೆ ಕಡಿಮೆ ಆದಾಗ ಮನೆಗೆ ಬಂದ್ರೂ ಕೋವಿಡ್ ಕಡಿಮೆಯಾಗಲಿಲ್ಲ. ರೋಗಲಕ್ಷಣಗಳು ಹಾಗೆಯೇ ಇದೆಯಂತೆ.

ಮುಜಾಫರ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳುವ ಪ್ರಕಾರ, ‘ ದೇಹದ ರೋಗನಿರೋಧಕ ಶಕ್ತಿ ಸಕ್ರಿಯವಾಗಿಲ್ಲದ ಕಾರಣ ಈ ಸಮಸ್ಯೆ ಉಂಟಾಗಿದೆ’ ಎಂದು ಹೇಳಿದ್ದಾರೆ. ಟರ್ಕಿಯಲ್ಲಿ ಕೋವಿಡ್ 19 ನೆಗೆಟಿವ್ ಇದ್ದರೆ ಮಾತ್ರ ಹೊರಗಡೆ ಹೋಗಲು ಅವಕಾಶವಿದೆಯಂತೆ. ಅದಕ್ಕಾಗಿ ಮುಜಾಫರ್ ಪ್ರತ್ಯೇಕವಾಗಿ ಮನೆಯಲ್ಲಿ ಇದ್ದಾರೆ.

ಮುಜಾಫರ್ ಪತ್ನಿ ಮತ್ತು ಮಗ ಕೋವಿಡ್ ನಿಂದ ಸುರಕ್ಷಿತವಾಗಿದ್ದಾರೆ. ಮುಜಾಫರ್ ಲ್ಯುಕೇಮಿಯಾದಿಂದ ಕೂಡಾ ಬಳಲುತ್ತಿದ್ದಾರಂತೆ. ಈ ಭಯ ಅವರ ಕುಟುಂಬವನ್ನು ಕಾಡಲು ಶುರುವಾಗಿದೆ. ಕೋವಿಡ್ ಕಡಿಮೆಯಾಗದೇ ಇರುವುದರಿಂದ ಕುಟುಂಬದ ಜೊತೆ ಬೆರೆಯಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಏಕೆ ಕಡಿಮೆಯಾಗುತ್ತಿಲ್ಲ ಎಂದು ಬೇಸರಪಟ್ಟುಕೊಂಡಿದ್ದಾರೆ.

Leave A Reply

Your email address will not be published.