ವಿಶ್ವದ ಅತ್ಯಂತ ಸಣ್ಣ ನದಿ ಎಲ್ಲಿರೋದು ಗೊತ್ತೇ ? ಮನುಷ್ಯ ಹಾರಿ ದಾಟಬಹುದಾದಷ್ಟು ಕಿರಿದಾದ ನದಿ !! ಈ ನದಿ ಬಗ್ಗೆ ಕುತೂಹಲಕಾರಿ ವಿಷಯ ಇಲ್ಲಿದೆ

ನಿಮಗೆ ಗೊತ್ತಿದೆಯೇ ? ಪ್ರಪಂಚದ ಅತ್ಯಂತ ಕಿರಿದಾದ ನದಿ ಯಾವುದೆಂದು ? ಈ ನದಿ ಕಿರಿದಾದ ಕಾಲುವೆಯಂತೆ ಕಾಣುತ್ತದೆ. ಈ ನದಿಯು ವಿಶ್ವದ ಅತೀ ಸಣ್ಣ ನದಿಯೆಂದು ಗುರುತಿಸಿಕೊಂಡಿದೆ. ಕೃಷಿ ಭೂಮಿಗಳಲ್ಲಿ ನೀರು ಹಾಯಿಸಲು ಇರುವ ಸಣ್ಣ ಕಾಲುವೆಯಂತೆ ಕಾಣುತ್ತದೆ ಈ ನದಿ.

ಈ ನದಿಯ ಹೆಸರು ಹುಲೈ. ಇದು ಚೀನಾದ ಮಂಗೋಲಿಯಲ್ಲಿದೆ. ಈ ನದಿಯು 17 ಕಿ ಮೀ ನಷ್ಟು ಉದ್ದವಿದ್ದು, ಸರಾಸರಿ ಅಗಲ ಕೇವಲ 15 ಸೆಂ.ಮೀ. ಒಂದು ಕಡೆ ನದಿಯು ಕೇವಲ 4 ಸೆಂ.ಮೀ ನಷ್ಟೇ ಅಗಲ ಇರುವುದು ಕಂಡುಬರುತ್ತದೆ. ಚೀನಾದ ತಜ್ಞರ ಪ್ರಕಾರ ಕಳೆದ 10,000 ವರ್ಷಗಳಿಂದ ಈ ನದಿಯು ಹರಿಯುತ್ತಿದೆಯಂತೆ. ಈ ನದಿ ಕೆಲವೇ ಸೆಂ.ಮೀ.ನಷ್ಟು ಅಗಲವಿದೆ. ಹಲವು ಕಡೆಗಳಲ್ಲಿ ಈ ನದಿಯನ್ನು ಹಾರಿ ದಾಟಬಹುದಾದಷ್ಟು ಸಣ್ಣದಾಗಿದೆ ಎಂಬುವುದು ಇನ್ನೂ ವಿಶೇಷ.

‘ಬುಕ್ ಬ್ರಿಡ್ಜ್ ರಿವರ್’ ( ಪುಸ್ತಕ ಸೇತುವೆ ನದಿ) ಎಂದೂ ಕರೆಯುತ್ತಾರೆ ಹುಲೈ ನದಿಯನ್ನು. ಈ ಹೆಸರು ಚೀನೀ ಜಾನಪದದಿಂದ ಬಂದಿದೆ. ಇದಕ್ಕೊಂದು ಹಿನ್ನೆಲೆ ಇದೆ ಅದೇನೆಂದರೆ, ಹುಡುಗನೋರ್ವನು ಹುಲೈ ನದಿಯನ್ನು ದಾಟುವಾಗ ತನ್ನ ಪುಸ್ತಕವನ್ನು ಬೀಳಿಸಿದನು. ಅದು ಈ ನದಿಯ ಮೇಲೆ ಸೇತುವೆಯಂತೆ ಬಿದ್ದಿತ್ತು. ಈ ಪುಸ್ತಕ ಸೇತುವೆಯ ಮೇಲಿನಿಂದ ಇರುವೆಗಳು ಹಾಗೂ ಇತರ ಸಣ್ಣ ಜೀವಿಗಳು ನದಿಯನ್ನು ದಾಟಿದವು‌. ಈ ಕಾರಣದಿಂದಾಗಿ ಈ ನದಿಗೆ ಪುಸ್ತಕ ಸೇತುವೆ ನದಿ ಎಂದು ಹೆಸರಿಡಲಾಗಿದೆಯಂತೆ.

ಅಂತರ್ಜಲದಿಂದ ಹುಟ್ಟಿ ಹಿಗ್ಗಿನ್ಸ್ ಹುಲ್ಲುಗಾವಲಿನಲ್ಲಿ ಹರಿದು ದಲೈ ಲಾಮಾ ನೂರ್ ಸರೋವರವನ್ನು ಸೇರುತ್ತದೆ ಈ ನದಿ. ಹುಲೈಯನ್ನು ನದಿಯೆಂದು ಪರಿಗಣಿಸುವ ಹಲವು ಭಿನ್ನಾಭಿಪ್ರಾಯಗಳಿವೆ. ನೀರಿನ ಹರಿವನ್ನು ನದಿಯೆಂದು ಪರಿಗಣಿಸಲು ಅದರ ಗಾತ್ರಕ್ಕೆ ಯಾವುದೇ ಸಂಬಂಧವಿಲ್ಲ ಎಂಬ ವಾದವೂ ಇದೆ. ಹುಲೈಯು ನದಿಯ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಅಷ್ಟು ಮಾತ್ರವಲ್ಲದೇ ಹುಲೈ ವರ್ಷವಿಡೀ ಹರಿಯುತ್ತದೆ ಎಂಬುದು ವಿಶೇಷ.

Leave A Reply

Your email address will not be published.