ಈ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಮಾಜಿ ಕ್ರಿಕೆಟಿಗನಿಗೆ ಎದುರಾಯ್ತು ಕರುಳು ಕ್ಯಾನ್ಸರ್ ಕಾಯಿಲೆ|’ಸದ್ಯ ಇನ್ನೊಂದು ಹೋರಾಟಕ್ಕೆ ಸಿದ್ಧವಾಗಿದ್ದೇನೆಂದು’ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್

ಕೆಲವರ ಜೀವನದಲ್ಲಿ ಅನಾರೋಗ್ಯವೆಂಬುದು ಎಷ್ಟರಮಟ್ಟಿಗೆ ಶನಿಯಾಗಿ ವಕ್ಕರಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಕ್ರಿಸ್ ಕೆಯಿರ್ನ್ಸ್ ಇದೀಗ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಕರಾಳ ಸತ್ಯವನ್ನು ಹಂಚಿಕೊಂಡಿದ್ದು, ತಾನು ಕ್ಯಾನ್ಸರ್‌ ರೋಗಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನು ಕ್ರಿಸ್, ನನಗೆ ಕರುಳು ಕ್ಯಾನ್ಸರ್‌ ಇದೆ ಎಂದು ವೈದ್ಯರು ಹೇಳಿದ್ದಾರೆ. ಸಾಮಾನ್ಯ ವೈದ್ಯಕೀಯ ಪರೀಕ್ಷೆಗೆಂದು ಹೋದ ನನಗೆ ನಿಜವಾಗಿಯೂ ಇದೊಂದು ದೊಡ್ಡ ಶಾಕ್‌.ಈ ವಿಷಯದ ಬಗ್ಗೆ ಸರ್ಜನ್‌ಗಳು, ಸ್ಪೆಷಲಿಸ್ಟ್‌ಗಳೊಂದಿಗೆ ಮತ್ತೊಮ್ಮೆ ಚರ್ಚಿಸಿದ್ದೇ ಆದರೂ ಏನು ಪ್ರಯೋಜನವಾಗಲಿಲ‍್ಲ. ಸದ್ಯ ಇನ್ನೊಂದು ಹೋರಾಟಕ್ಕೆ ಸಿದ್ಧವಾಗಬೇಕಿದೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಅಯ್ಯೋ.. ನಿಮಗೆ ಏಕೆ ಹೀಗೆಲ್ಲ ನಡೆಯುತ್ತಿದೆ ಕೆಯಿರ್ನ್ಸ್ ಎಂದು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಕೆಯಿರ್ನ್ಸ್‌ಗೆ ಹೃದಯಾಘಾತ ಸಂಭವಿಸಿತ್ತು. ನಂತರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮೇಲೆ ಪಾರ್ಶ್ವವಾಯುವಿಗೆ ಗುರಿಯಾದರು. ಬೆನ್ನು ಮೂಳೆಗೂ ಕೂಡ ತುಂಬಾ ತೊಂದರೆಯಾಯಿತು. ಸಾಕಷ್ಟು ದಿನಗಳ ವರೆಗೂ ವೆಂಟಿಲೇಟರ್‌ ಮೇಲೆ ಚಿಕಿತ್ಸೆ ಪಡೆದ ನಂತರ ಕೆಯಿರ್ನ್ಸ್‌ ಗುಣಮುಖರಾಗಿದ್ದರು.

ಕಿವೀಸ್‌ ಮಾಜಿ ಆಟಗಾರ ಲಾನ್ಸ್‌ ಕೆಯಿರ್ನ್ಸ್‌ ಮಗನಾದ ಕ್ರಿಸ್‌ ಕೆಯಿರ್ನ್ಸ್‌ ನ್ಯೂಜಿಲ್ಯಾಂಡ್‌ ಪರ 62 ಟೆಸ್ಟ್, 215 ಏಕದಿನ ಪಂದ್ಯಗಳನ್ನ ಆಡಿದ್ದಾರೆ. 1989- 2006 ರವರೆಗೆ ಕಿವೀಸ್‌ಗೆ ಪ್ರಾತಿನಿಧ್ಯ ವಹಿಸಿದ್ದರು.

Leave A Reply

Your email address will not be published.