ಉಪ್ಪಿನಂಗಡಿ : ನೆಕ್ಕಿಲಾಡಿಯಲ್ಲಿ ಕಾರು -ಅಟೋ ರಿಕ್ಷಾ ನಡುವೆ ಅಪಘಾತ,ಇಬ್ಬರಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಅಜಾಗರೂಕತೆಯ ಚಾಲನೆಯಿಂದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಎದುರಿನಿಂದ ಬರುತ್ತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾ ಚಾಲಕ ಹಾಗೂ ಅದರ ಸವಾರ ಗಂಭೀರ ಗಾಯಗೊಂಡ ಘಟನೆ 34 ನೆಕ್ಕಿಲಾಡಿಯಲ್ಲಿ ಜ.28ರಂದು ನಡೆದಿದೆ.

ಅಟೋ ಚಾಲಕ ನೆಕ್ಕಿಲಾಡಿಯ ಕಲಂದರ್ ಶಾಫಿ (41) ಹಾಗೂ ಅಸ್ಸಾಂ ಮೂಲದ ಶಹಾಬುದ್ದೀನ್ ಗಂಭೀರ ಗಾಯಗೊಂಡವರು

ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.