ಚಾರ್ಮಾಡಿ : ಗುಡ್ಡಕ್ಕೆ ಬೆಂಕಿ ,ಸುಮಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ

Share the Article

ಗುಡ್ಡಕ್ಕೆ ಬೆಂಕಿ ತಗುಲಿ ಸುಮಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಮಲಯಮಾರುತ ಗುಡ್ಡದಲ್ಲಿ ನಡೆದಿದೆ.

ಬಿರುಬಿಸಿಲಿಗೆ ಗುಡ್ಡಗಳೆಲ್ಲಾ ಒಣಗಿ ನಿಂತಿದೆ. ಮಲಯ ಮಾರುತ ಗುಡ್ಡ ವ್ಯೂ ಪಾಯಿಂಟ್ ಆಗಿರುವುದರಿಂದ ಪ್ರವಾಸಿಗರು ಯಾರೋ ಸಿಗರೇಟ್ ಸೇದಿ ಎಸೆದಿರುವುದರಿಂದ ಬೆಂಕಿ ತಗುಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಗುಡ್ಡಕ್ಕೆ ಬೆಂಕಿ ತಗುಲಿದೆ ಎಂದು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಅಧಿಕಾರಿಗಳು ಬೆಂಕಿಯನ್ನ ನಂದಿಸಿದ್ದಾರೆ. ರಸ್ತೆಯಿಂದ ಸುಮಾರು ನಾಲ್ಕೈದು ಕಿ.ಮೀ. ದೂರದ ಎತ್ತರಕ್ಕೆ ಬೆಟ್ಟಕ್ಕೆ ದೌಡಾಯಿಸಿದ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave A Reply