ಹೆತ್ತಕಂದನನ್ನೇ ಜೂಜಿನಲ್ಲಿ ಪಣ ಇಟ್ಟ ತಂದೆ| ಕೋಪಗೊಂಡ ಹೆಂಡತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು

Share the Article

ಮಕ್ಕಳು ದೇವರಿಗೆ ಸಮಾನ ಅಂತ ದೊಡ್ಡವರು ಮಾತೊಂದನ್ನು ಹೇಳುತ್ತಾರೆ. ಎಷ್ಟೋ ಜನ ದಂಪತಿಗಳಿಗೆ ಮಕ್ಕಳಾಗದೇ ದೇವರಿಗೆ ಹರಕೆ ಹೊತ್ತು ಮಗು ಆಗಲಿ ಎಂದು ಬೇಡುವವರೂ ಇದ್ದಾರೆ. ಇಂಥದರಲ್ಲಿ ಇಲ್ಲೊಬ್ಬ ತನ್ನ ಚಟಕ್ಕೋಸ್ಕರ ಮಾಡಿದ ಸಾಲವನ್ನು ತೀರಿಸಲು ತಾನು ಹೆತ್ತ ಕಂದನನ್ನೇ ಮಾರಾಟ ಮಾಡಿದ್ದಾನೆ.

ಸಾಲ ತೀರಿಸಲು ಮಗುವನ್ನು ಮಾರಿದ ತಂದೆ ವಿರುದ್ಧ ಆತನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಈ ಪ್ರಕರಣ ನಡೆದಿರುವುದು ತಮಿಳುನಾಡಿನ ತಿರುಚ್ಛಿ ಜಿಲ್ಲೆಯ ಉರೈಯೂರ್ ಖಿಜಪಾಂಡಮಂಗಲದಲ್ಲಿ ನಡೆದಿದೆ.

ಅಬ್ದುಲ್ ಸಲಾಂ ಮತ್ತು ಕರುಣಿಶಾ ತನ್ನ ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಕೆಲವು ತಿಂಗಳ ಹಿಂದೆ ಅವರಿಗೆ ಇನ್ನೊಂದು ಮಗುವಾಗಿದೆ. ಅಬ್ದುಲ್ ಸಲಾಂ ಕೂಲಿಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಜೂಜಾಟದ ಚಟವೊಂದಿದೆ. ಕೆಲವೊಮ್ಮೆ ಸ್ನೇಹಿತರು ಸಂಬಂಧಿಕರಿಂದ ಹಣ ಪಡೆದು ಜೂಜಾಡುತ್ತಿದ್ದ.

ಈತ ಆರೋಖಿರಾಜ್ ಎಂಬುವವರಿಂದ 80 ಸಾವಿರ ಪಡೆದಿದ್ದ. ಈ ಸಾಲವನ್ನು ತೀರಿಸಲಾಗದೆ ಒದ್ದಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ ಅಲೋಖಿರಾಜ್ ನಿನ್ನ ಮಗುವನ್ನು ಕೊಡು ಎಂದು ಡೀಲ್ ಮಾಡಲು ಹೇಳಿದ್ದ. ಇದರ ನಂತರ ಅಬ್ದುಲ್ ಸಲಾಂ ಈ ವಿಚಾರವಾಗಿ ಪತ್ನಿಯೊಂದಿಗೆ ಮಾತನಾಡಿ ಐದನೇ ಮಗುವನ್ನು ಮಾರಾಟ ಮಾಡುವಂತೆ ಅನುಮತಿ ಕೇಳಿ ಮನವೊಲಿಸಿದ್ದ. ಆ ಬಳಿಕ ತನ್ನ ಮಗುವನ್ನು ಮಾರಾಟ ಮಾಡಿದ್ದಾನೆ. ಈ ಡೀಲ್ ನಿಂದ ಹೆಚ್ಚು ಹಣ ಕೂಡಾ ಪಡೆದಿದ್ದಾನೆ.

ಆದರೆ ನಂತರ ಮಗುವಿನ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಜಗಳ ಪ್ರಾರಂಭವಾಗಿದೆ.

ಮಗುವನ್ನು ಮರಳಿ ತರುವಂತೆ ತಾಯಿ ಕರುಣಿಶಾ ಪತಿಗೆ ಹೇಳಿದ್ದಾಳೆ. ಮಗುವನ್ನು ಕರೆತರಲು ಅಬ್ದುಲ್ ನಿರಾಕರಿಸಿದಾಗ, ತಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ನಂತರ ಪೊಲೀಸರು ಅಬ್ದುಲ್ ಸಲಾಂನನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಆರೋಖಿರಾಜ್ ಹಾಗೂ ಆತನ ಸೋದರಳಿಯ ನಂದನ್ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave A Reply