‘ರಾಷ್ಟ್ರಗೀತೆ’ಗೆ ಅವಮಾನ ಮಾಡಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ|ಲೈವ್ ಟೆಲಿಕಾಸ್ಟ್‌ ನಲ್ಲಿ ಇವರ ವರ್ತನೆ ನೋಡಿ ಆಕ್ರೋಶ ವ್ಯಕ್ತಪಡಿಸಿದ ಕ್ರೀಡಾಭಿಮಾನಿಗಳು

ಭಾರತೀಯರಾದ ನಾವು ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಗೆ ಗೌರವ ಸಲ್ಲಿಸಬೇಕಾಗಿರೋದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಅದೆಷ್ಟೋ ಕ್ರೀಡಾಭಿಮಾನಿಗಳ ಬಳಗವನ್ನೇ ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಬಗ್ಗೆ ಎಲ್ಲೆಡೆ ವಿವಾದ ಸೃಷ್ಟಿಯಾಗಿದೆ.

ನಿನ್ನೆ ಕೇಪ್‌ ಟೌನ್‌ನ ನ್ಯೂಲೆಂಡ್ಸ್‌ ಕ್ರೀಡಾಂಗಣದಲ್ಲಿ ನಡೆದ 3ನೇ ಏಕದಿನ ಕ್ರಿಕೆಟ್‌ ಪಂದ್ಯದ ಆರಂಭಕ್ಕೂ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆಯನ್ನು ಮೊಳಗಿಸಲಾಯ್ತು. ಈ ಸಂದರ್ಭದಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಬಳಗ ರಾಷ್ಟ್ರಗೀತೆ ಹಾಡುವ ಮೂಲಕ ತಾಯ್ನಾಡಿಗೆ ಗೌರವ ಸೂಚಿಸಿದರು. ಆದರೆ ಕೊಹ್ಲಿ ಮಾತ್ರ ಬೇರೆಯದ್ದೇ ಲೋಕದಲ್ಲಿದ್ದರು.

ಹೌದು.ಮಾಜಿ ನಾಯಕ ವಿರಾಟ್‌ ಕೊಹ್ಲಿ ಚ್ಯೂಯಿಂಗ್ ಗಮ್‌ ಅಗೆಯುತ್ತಾ ನಿಂತಿದ್ದು, ಲೈವ್‌ ಟೆಲಿಕಾಸ್ಟ್‌ ಕೂಡ ಆಗಿದೆ.ರಾಷ್ಟ್ರಗೀತೆಗೆ ಅವಮಾನಿಸಿದ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಗೆ ಕಾರಣರಾಗಿದ್ದಾರೆ.ಏಕದಿನ ಸರಣಿ ತಂಡದ ನಾಯಕತ್ವ ಕಳೆದುಕೊಂಡ ಕಾರಣ ಟೀಂ ಇಂಡಿಯಾದ ಸಾಲಿನಲ್ಲಿ ಮೊದಲಿಗನಾಗಿ ವಿರಾಟ್‌ ಕೊಹ್ಲಿ ನಿಂತಿರಲಿಲ್ಲ. ಆದರೆ ರಾಷ್ಟ್ರಗೀತೆ ಆರಂಭವಾದ ಬಳಿಕ ಕ್ಯಾಮೆರಾದವರು ವಿರಾಟ್ ಕೊಹ್ಲಿ ಕಡೆಗೆ ಹೆಚ್ಚು ಪೋಕಸ್‌ ಮಾಡಿದ್ದರು. ಎಲ್ಲೋ ಕಳೆದು ಹೋಗಿರುವವರಂತೆ ಕಂಡ ಕೊಹ್ಲಿ, ಚ್ಯೂಯಿಂಗ್ ಗಮ್ ಜಗಿಯುತ್ತಾ ತಮ್ಮದೇ ಲೋಕದಲ್ಲಿ ಮುಳುಗಿದ್ದರು.

ವಿರಾಟ್ ಕೊಹ್ಲಿ ವರ್ತನೆಗೆ ಕ್ರೀಡಾಭಿಮಾನಿಗಳಷ್ಟೇ ಅಲ್ಲದೇ, ಜನಸಾಮಾನ್ಯರೂ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ರಾಷ್ಟ್ರಗೀತೆಗೆ ಗೌರವ ಸೂಚಿಸದೇ, ಚ್ಯೂಯಿಂಗ್ ಗಮ್ ಅಗೆಯುತ್ತಿರುವುದನ್ನು ಕಂಡು ಕಿಡಿಕಾರಿದ್ದಾರೆ. ಟ್ವಿಟ್ಟರ್ ಸೇರಿದಂತೆ ಅನೇಕ ಸೋಷಿಯಲ್‌ ಮೀಡಿಯಾಗಳಲ್ಲಿ ಕೊಹ್ಲಿಯನ್ನು ತರಾಟೆಗದೆ ತೆಗೆದುಕೊಂಡಿದ್ದಾರೆ. “ಕ್ರೀಡಾಂಗಣದಲ್ಲಿ ನಮ್ಮ ದೇಶದ ರಾಷ್ಟ್ರಗೀತೆ ಮೊಳಗುತ್ತಿರುವ ವೇಳೆ ಹೀಗೆ ಚ್ಯೂಯಿಂಗ್ ಗಮ್ ಅಗೆಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿಯಾ?” ಅಂತ ಟೀಕಿಸಿದ್ದಾರೆ.

Leave A Reply

Your email address will not be published.