ಮಂಗಳೂರು ವಿವಿಯಲ್ಲಿ ಉದ್ಯೋಗವಕಾಶ: ಫೆ.04 ರಂದು ನೇರ ಸಂದರ್ಶನಕ್ಕೆ ಆಹ್ವಾನ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆ : ಲ್ಯಾಬ್ ಅಸಿಸ್ಟೆಂಟ್ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ ತೇರ್ಗಡೆ ಹೊಂದಿರಬೇಕು.

ಲೈಬ್ರರಿ ಅಸಿಸ್ಟೆಂಟ್ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯಸಿ/ ಡಿಪ್ಲೋಮಾ ಇನ್ ಲೈಬ್ರರಿ ಸೈನ್ಸ್ ನ್ನು ಯುನಿವರ್ಸಿಟಿಯಿಂದ ಪಡೆದಿರಬೇಕು.

ಎ/ಸಿ ಮೆಕ್ಯಾನಿಕ್ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರುಪಿಯುಸಿ ತೇರ್ಗಡೆ ಹೊಂದಿರಬೇಕು. ಎ.ಸಿ. ಮೆಕ್ಯಾನಿಕಲ್ ಸರ್ಟಿಫಿಕೇಟ್ ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಹೊಂದಿರಬೇಕು.

ಪ್ಲಂಬರ್ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ ಎಸ್ ಎಲ್ ಸಿ ಪಾಸಾಗಿರಬೇಕು. ಹಾಗೂ ಕನಿಷ್ಠ ಒಂದು ವರ್ಷ ಕೆಲಸದ ಅನುಭವ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ :ಮೇಲಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 38 ಆಗಿರಬೇಕು.

ಈ ಹುದ್ದೆಗಳು ತಾತ್ಕಾಲಿಕ ನೆಲೆಯಲ್ಲಿ ಭರ್ತಿ ಮಾಡಲಾಗುವುದು. ಹನ್ನೊಂದು ತಿಂಗಳ ಅವಧಿ ಅಥವಾ ಮುಂದಿನ ಅವಧಿಯವರೆಗೆ ನೇಮಕ ಮಾಡಿಕೊಳ್ಳಲಾಗುವುದು.

ಸಂದರ್ಶನ ಸಮಯ : ದಿನಾಂಕ : 04-02-2022 ರಂದು ಪೂರ್ವಾಹ್ನ 10.30 ಗಂಟೆಗೆ ಸಿಂಡಿಕೇಟ್ ಸಭಾಂಗಣ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಅರ್ಹ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ಸದರಿ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬಹುದು.

ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ವೆಬ್ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಶೈಕ್ಷಣಿಕ ವಿದ್ಯಾರ್ಹತೆ, ವರ್ಗ, ಜನನ ದಿನಾಂಕ, ಅನುಭವ ಇತ್ಯಾದಿಗಳಿಗೆ ಸಂಬಂಧಿಸಿದಂತೆ ‌ದಾಖಲೆ‌ಪತ್ರಗಳ ಪ್ರತಿಗಳೊಂದಿಗೆ ಹಾಜರಿರತಕ್ಕದ್ದು.

Leave A Reply