ಮತದಾರರ ಸ್ಪಷ್ಟ ಆದೇಶದ ಸಂಪೂರ್ಣ ಅಗೌರವದ ಪ್ರತಿಬಿಂಬ ಇದು- ಗೋವಾ ಶಾಸಕರ ನಡೆಯನ್ನು ಕಣೆಕಿದ ಎಡಿಆರ್

ಕೇವಲ 40 ವಿಧಾನಸಭಾ ಸದಸ್ಯ ಬಲ, 2 ಲೋಕಸಭಾ ಸದಸ್ಯರನ್ನು ಹೊಂದಿರುವ ಗೋವಾ ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ‘ಸಾಟಿಯಿಲ್ಲದ’ ದಾಖಲೆ ನಿರ್ಮಿಸಿದ ಎಂದು ಸಂಘಟನೆಯೊಂದು ವರದಿ ಮಾಡಿದೆ.

ರಾಜ್ಯ ವಿಧಾನಸಭೆಯ ಒಟ್ಟು ಬಲದ ಶೇಕಡಾ 50 ರಷ್ಟಿರುವ ಗೋವಾದ 24 ಶಾಸಕರು ಕಳೆದ ಐದು ವರ್ಷಗಳಲ್ಲಿ ಪಕ್ಷಗಳನ್ನು ಬದಲಾಯಿಸಿದ್ದಾರೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ತಿಳಿಸಿದೆ. ‘ಗೋವಾದಲ್ಲಿ ಫೆಬ್ರವರಿ 14ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.

ಪ್ರಸ್ತುತ ವಿಧಾನಸಭೆಯ ಐದು ವರ್ಷಗಳ ಅವಧಿಯಲ್ಲಿ (2017-2022), 24 ಶಾಸಕರು ತಮ್ಮ ಪಕ್ಷಗಳನ್ನು ಬದಲಾಯಿಸಿದ್ದಾರೆ. ಇದು ಸದನದ ಒಟ್ಟು ಬಲದ ಶೇಕಾಡ 60 ರಷ್ಟಿದೆ. ಇದು ಭಾರತದಲ್ಲಿ ಬೇರೆಲ್ಲಿಯೂ ಸಂಭವಿಸಿಲ್ಲ. ಮತದಾರರ ಸ್ಪಷ್ಟ ಆದೇಶದ ಸಂಪೂರ್ಣ ಅಗೌರವದ ಪ್ರತಿಬಿಂಬ ಇದು” ಎಂದು ಎಡಿ ಹೇಳಿದೆ.

Leave A Reply

Your email address will not be published.