ಬೆಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಶಿಕ್ಷಕಿ ಕೆಲಸದಿಂದಲೇ ವಜಾ! | ವಿಚ್ಚೇದನ ನೀಡಿದ ಪತಿ
ಈಜಿಪ್ಟ್‌ನ ಶಿಕ್ಷಕಿಯೊಬ್ಬರು ಬೆಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಹೊರಹೊಮ್ಮಿ ಆಕೆಯನ್ನು ಶಾಲೆಯಿಂದ ವಜಾಗೊಳಿಸಲಾಗಿರುವುದಲ್ಲದೆ ಆಕೆಯ ಪತಿ ಆಕೆಗೆ ವಿಚ್ಛೇದನ ನೀಡುವುದಕ್ಕೂ ಕಾರಣವಾಯಿತು. ಬಿಬಿಸಿ ಪ್ರಕಾರ, ಈ ಘಟನೆಯು ದೇಶದಲ್ಲಿ ರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಿದೆ.
ಕೆಲವರು ಆಕೆಯದು ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರೆ ಮತ್ತೆ ಕೆಲವರು ಆಕೆಯ ‘ಜೀವನ ಮೌಲ್ಯಗಳನ್ನು ” ಪಶ್ನಿಸಿದ್ದಾರೆ.
ಆಯಾ ಯೂಸೆಫ್ ನೈಲ್ ನದಿಯ ದೋಣಿಯಲ್ಲಿ ನೃತ್ಯ ಮಾಡುತ್ತಾ ತಲ್ಲೀನರಾಗಿದ್ದಾಗ ದೋಣಿಯಲ್ಲಿದ್ದ ಅವರ ಸಹದ್ಯೋಗಿಯೊಬ್ಬರು ಆಕೆಯ ವಿಡಿಯೋವನ್ನು ತೆಗೆದಿದ್ದಾರೆ. ಸಹೋದ್ಯೋಗಿ ತನ್ನ ಅನುಮತಿಯಿಲ್ಲದೆ ತನ್ನನ್ನು ಚಿತ್ರೀಕರಿಸಿದ್ದಾನೆ ಎಂದು ಶಿಕ್ಷಕಿ ಹೇಳಿಕೊಂಡಿದ್ದಾಳೆ.
ಬೆಲ್ಲಿ ಡಾನ್ಸ್ ಪ್ರಾಚೀ ಈಜಿಪ್ಟ್ನ ಸಂಪ್ರದಾಯದ ಒಂದು ಭಾಗವಾಗಿದ್ದರೂ, ಆಧುನಿಕ ಈಜಿಪ್‌ನಲ್ಲಿ ಮಹಿಳೆಯರು ಸಾರ್ವಜನಿಕವಾಗಿ ನೃತ್ಯ ಮಾಡುವುದನ್ನು ವಿರೋಧಿಸಲಾಗುತ್ತದೆ.
ನೈಲ್ ನದಿಯ ದೋಣಿಯಲ್ಲಿನ ಸಂತಸದ ಹತ್ತು ನಿಮಿಷಗಳು ನನ್ನ ಜೀವನಕ್ಕೆ ಮುಳುವಾಯಿತು” ಎಂದು ಯೂಸಫ್ ದುಃಖ ಹಂಚಿಕೊಂಡಿದ್ದಾರೆ.