ವಿಮಾನ ಪ್ರಯಾಣದ ವೇಳೆ ಕೊರೊನಾ ಸೋಂಕು ದೃಢ | ಮೂರು ಗಂಟೆಗಳ ಕಾಲ ಶೌಚಾಲಯದಲ್ಲೇ ಐಸೋಲೇಟ್ ಆದ ಮಹಿಳೆ!!

Share the Article

ಕೊರೋನಾ ಸೋಂಕು ತಗುಲಿದ ವ್ಯಕ್ತಿ ಐಸೋಲೆಟ್ ಗೆ ಒಳಗಾಗುವುದು ಮಾಮೂಲು. ಹಾಗೆಯೇ ಇಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಶೌಚಾಲಯದಲ್ಲೇ ಐಸೊಲೇಟ್ ಆದ ಘಟನೆ ಅಮೇರಿಕಾದಲ್ಲಿ ನಡೆದಿದೆ.

ಶಿಕಾಗೋದಿಂದ ಐಸ್ಲ್ಯಾಂಡ್ ಗೆ ತೆರಳುತ್ತಿದ್ದ ಮಹಿಳೆಗೆ ಮಾರ್ಗಮಧ್ಯೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಬಳಿಕ ಮೂರು ಗಂಟೆಗಳ ಕಾಲ ಶೌಚಾಲಯದಲ್ಲೇ ಐಸೊಲೇಟ್ ಆಗಿದ್ದಾರೆ ಎಂದು ವರದಿಯಾಗಿದೆ.

ಮಾರಿಸಾ ಫೋಟಿಯೊ ಎಂಬ ಮಹಿಳೆ ವಿಮಾನ ಪ್ರಯಾಣಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿರಬೇಕಾದರೆ ಆಕೆಗೆ ಗಂಟಲು ನೋವು ಪ್ರಾರಂಭವಾಗಿದ್ದು, ಆಕೆ ತಕ್ಷಣ ಶೌಚಾಲಯಕ್ಕೆ ತೆರಳಿ ರ್‍ಯಾಪಿಡ್ ಪರೀಕ್ಷೆ ಮಾಡಿಕೊಂಡಿದ್ದಾರೆ. ಈ ಪರೀಕ್ಷೆಯಲ್ಲಿ ಆಕೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆಕೆ ಶೌಚಾಲಯದಲ್ಲೇ ಐಸೊಲೇಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.

Leave A Reply