ಜನವರಿ 3 ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ | ಇಂದಿನಿಂದಲೇ ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಆರಂಭ

ಕೊರೋನಾ ರೂಪಾಂತರಿ ತಳಿ ಒಮಿಕ್ರೋನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ ಜ.3ರಿಂದ ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಸೂಚಿಸಿದ್ದಾರೆ.

Ad Widget

ಇತ್ತೀಚೆಗೆ ಡಿಸಿಜಿಐ ಮಕ್ಕಳಿಗೆ ನೀಡಲು ಕೋವಾಕ್ಸಿನ್ ಲಸಿಕೆಯನ್ನು ಅನುಮೋದಿಸಿದೆ. ತುರ್ತು ಸಂದರ್ಭದಲ್ಲಿ 12 ರಿಂದ 18 ವರ್ಷದ ಮಗುವಿಗೆ ಈ ಲಸಿಕೆಯನ್ನು ನೀಡಬಹುದು. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲು ಡಿಜಿಸಿಐ ಅನುಮೋದನೆ ನೀಡಿದೆಯಾದರೂ, ಕೇಂದ್ರ ಸರ್ಕಾರವು 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಲಸಿಕೆ ಡೋಸ್ ನೀಡಲು ನಿರ್ಧರಿಸಿದೆ. ಕೋವಿನ್ ಪೋರ್ಟಲ್‌ನಲ್ಲಿ ಮಕ್ಕಳ ಲಸಿಕೆ ನೋಂದಣಿ ಇಂದಿನಿಂದ ಆರಂಭವಾಗಿದೆ. ನೀವು ಇಂದಿನಿಂದಲೇ ನಿಮ್ಮ ಹೆಸರನ್ನು ಕೊರೋನಾ ಲಸಿಕೆ ಪಡೆಯಲು ನೊಂದಾಯಿಸಬಹುದು. ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತೆ.

Ad Widget . . Ad Widget . Ad Widget . Ad Widget

Ad Widget

ನ್ಯಾಷನಲ್‌ ಟೆಕ್ನಿಕಲ್‌ ಅಡ್ವೈಸರಿ ಗ್ರೂಪ್‌ ಆಫ್‌ ಇಮ್ಯೂನಿಜೇಶನ್‌ ಶಿಫಾರಸ್ಸು ಹಾಗೂ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅದರಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಸಮನ್ವಯ ಸಾಧಿಸಲಿದ್ದಾರೆ. ಹೀಗಾಗಿ 2022 ಜ.3ರಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಹಾಗೂ ಶಾಸಕರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೋರಿದ್ದಾರೆ.

Ad Widget
Ad Widget Ad Widget

ಭಾರತದಲ್ಲಿ ಹೇಗಿದೆ ಸಿದ್ಧತೆ?

*ಜನವರಿ 1 ರಿಂದ CoWin ಪೋರ್ಟಲ್‌ನಲ್ಲಿ ಮಕ್ಕಳ ಲಸಿಕೆ ನೋಂದಣಿ ಆರಂಭ.
*ಈ ಸಮಯದಲ್ಲಿ, ವಿದ್ಯಾರ್ಥಿ ಗುರುತಿನ ಚೀಟಿಯಾಗಿ ಹತ್ತನೇ ತರಗತಿಯ ಐಡಿಯನ್ನು ಸೇರಿಸಲಾಗುತ್ತದೆ.
*ಜನವರಿ 3 ರಿಂದ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಅಧಿಕೃತವಾಗಿ ಆರಂಭ.
*ಪ್ರಸ್ತುತ, ಭಾರತೀಯ ಮಕ್ಕಳಿಗೆ ಕೋವಾಕ್ಸಿನ್ ಅನ್ನು ಹಾಕಲಾಗುತ್ತದೆ.
*ಇದಕ್ಕಾಗಿ 28 ದಿನಗಳ ಅಂತರವನ್ನು ನಿಗದಿಪಡಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: