ನಿಮ್ಮ ಬೈಕ್ ಉತ್ತಮ ಮೈಲೇಜ್ ನೀಡುತ್ತಿಲ್ಲ ಎಂಬ ಚಿಂತೆಯಲ್ಲಿದ್ದೀರಾ ?? | ಹಾಗಾದರೆ ಈ ಟ್ರಿಕ್ಸ್ ಗಳನ್ನು ಫಾಲೋ ಮಾಡಿ ನಿಮ್ಮ ಬೈಕ್ ಮೈಲೇಜ್ ಅನ್ನು ಹೆಚ್ಚಿಸಿಕೊಳ್ಳಿ

ಇತ್ತೀಚೆಗೆ ಪೆಟ್ರೋಲ್ ಬೆಲೆ ಗಗನ ಮುಟ್ಟುತ್ತಿದ್ದು, ಜನಸಾಮಾನ್ಯರ ಬಜೆಟ್ ಮೇಲೆ ಇದು ಭಾರೀ ಪರಿಣಾಮ ಬೀರಿದೆ. ಈ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೊಂದೆಡೆ ಪೆಟ್ರೋಲ್​​ ಬೆಲೆ ಇಳಿಕೆಯಾಗಬಹುದು ಎಂಬ ನಂಬಿಕೆಯಲ್ಲಿ ಪೆಟ್ರೋಲ್ ಚಾಲಿತ ಬೈಕ್‌ಗಳನ್ನೇ ಓಡಿಸುವವರು ಇದ್ದಾರೆ.

Ad Widget

ಆದರೆ ಇಂಧನಗಳ ಬೆಲೆ ಏರಿಕೆ ನಡುವೆ ತಮ್ಮ ವಾಹನ ಸರಿಯಾಗಿ ಮೈಲೇಜ್ ನೀಡದಿದ್ದರೆ ಹೇಗೆ? ಇಂತಹ ಸಮಸ್ಯೆಯನ್ನು ಅನೇಕರು ಅನುಭವಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳು ಕಂಪನಿ ತಿಳಿಯಪಡಿಸಿರುವ ಮೈಲೇಜ್​ ನೀಡದಿದ್ದರೆ ಜನರಿಗೆ ಅದರ ಬಳಕೆ ಕಷ್ಟಕರವೆಂದೆನಿಸುತ್ತದೆ. ಹಾಗಾಗಿ ಕೆಲವೊಂದು ಟ್ರಿಕ್ಸ್ ಬಗ್ಗೆ ಮಾಹಿತಿ ಇಲ್ಲಿದೆ. ಒಂದು ವೇಳೆ ನಿಮ್ಮ ಬೈಕ್​ ಉತ್ತಮ ಮೈಲೇಜ್​ ನೀಡದಿದ್ದರೆ ಈ ಟಿಕ್ಸ್ ಅನ್ನು ಅನುಸರಿಸಿ.

Ad Widget . . Ad Widget . Ad Widget .
Ad Widget

ಕಾಲಕಾಲಕ್ಕೆ ಸರ್ವಿಸ್​

Ad Widget
Ad Widget Ad Widget

ಬೈಕನ್ನು ಸರ್ವಿಸ್ ಮಾಡುವುದರಿಂದ ಅದರ ಮೈಲೇಜಿಗೆ ದೊಡ್ಡ ವ್ಯತ್ಯಾಸವಾಗುತ್ತದೆ. ನಿಮ್ಮ ಬೈಕ್ ಅನ್ನು ಸುಸ್ಥಿತಿಯಲ್ಲಿಟ್ಟರೆ ಅದು ಉತ್ತಮ ಮೈಲೇಜ್ ಕೂಡ ನೀಡುತ್ತದೆ. ಇಂಜಿನ್ ಮತ್ತು ಗೇರ್‌ಬಾಕ್ಸ್‌ಗೆ ಲೂಬ್ರಿಕೇಶನ್ ಅಗತ್ಯವಿದೆ ಮತ್ತು ಸರ್ವಿಸ್ ಮಾಡುವ ಮೂಲಕ ಮೊದಲಿನಂತೆಯೇ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ

ಟೈಯರ್ ಒತ್ತಡವನ್ನು ಟ್ರ್ಯಾಕ್ ಮಾಡಿ

ಬಹುತೇಕರು ಟೈರ್​ ಬಗ್ಗೆ ಗಮನಹರಿಸುವುದಿಲ್ಲ. ಟೈಯರ್ ಫ್ಲಾಟ್ ಆದ ಮೇಲೆ ಬದಲಾಯಿಸುವವರೇ ಹೆಚ್ಚು. ಆದರೆ ಹಾಗೆ ಮಾಡಬಾರದು. ಟೈಯರ್ ಒತ್ತಡವು ಬೈಕಿನ ಮೈಲೇಜ್ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಟೈಯರ್ ಒತ್ತಡವನ್ನು ಸರಿಯಾಗಿ ನಿರ್ವಹಿಸಿದರೆ, ಬೈಕು ಚಲಾಯಿಸಲು ಸಾಧ್ಯವಾಗುತ್ತದೆ, ಜೊತೆಗೆ ಬೈಕಿನ ಮೈಲೇಜ್ ಖಂಡಿತವಾಗಿಯೂ ಹೆಚ್ಚಾಗುತ್ತದೆ.

ಅನಗತ್ಯವಾಗಿ ಕ್ಲಚ್ ಒತ್ತಬೇಡಿ

ಅಗತ್ಯವಿದ್ದಾಗ ಮಾತ್ರ ಕ್ಲಚ್ ಅನ್ನು ಸರಿಯಾಗಿ ಬಳಸುವುದರಿಂದ ಬೈಕ್ ಉತ್ತಮ ಮೈಲೇಜ್ ನೀಡುತ್ತದೆ. ಅನಗತ್ಯವಾಗಿ ಮತ್ತೆ ಮತ್ತೆ ಕ್ಲಚ್ ಒತ್ತಿದರೆ ಸಹಜವಾಗಿಯೇ ಬೈಕ್ ಮೈಲೇಜ್ ಕಡಿಮೆಯಾಗುತ್ತದೆ. ಆದ್ದರಿಂದ ಉತ್ತಮ ಮೈಲೇಜ್ ಪಡೆಯಬೇಕಾದರೆ, ಕ್ಲಚ್ ಅನ್ನು ಅಗತ್ಯವಿದ್ದಾಗ ಮಾತ್ರ ಬಳಸುವುದು ಮುಖ್ಯ.

ಸಿಗ್ನಲ್‌ನಲ್ಲಿ ಬೈಕ್ ನಿಲ್ಲಿಸಿ

ಸಿಗ್ನಲ್ ನಲ್ಲಿ ಬೈಕ್ ರನ್ನಿಂಗ್​ನಲ್ಲಿ ಇರಿಸಬೇಡಿ. ಈ ಸಮಯದಲ್ಲಿ ಆಫ್ ಮಾಡಿದರೆ ಪೆಟ್ರೋಲ್ ಉಳಿತಾಯವಾಗುತ್ತದೆ. ಹಾಗಾಗಿ 15 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಟ್ರಾಫಿಕ್​ ಇದ್ದರೆ ನಿಮ್ಮ ಬೈಕ್ ಅನ್ನು ಆಫ್ ಮಾಡಿ, ಒಂದು ತಿಂಗಳೊಳಗೆ ಮೈಲೇಜ್ ಹೆಚ್ಚಾಗಿದೆ ಎಂದು ನೀವು ಕಂಡುಕೊಳ್ಳುತ್ತೀರಿ.

ಈ ಟ್ರಿಕ್ಸ್ ಗಳನ್ನು ಫಾಲೋ ಮಾಡಿ ನಿಮ್ಮ ಬೈಕ್ ನ ಮೈಲೇಜ್ ಅನ್ನು ಹೆಚ್ಚಿಸಿಕೊಳ್ಳಿ. ಈ ಮಾಹಿತಿಯನ್ನು ಇತರರೊಂದಿಗೂ ಹಂಚಿಕೊಳ್ಳಿ, ಇದರಿಂದ ಈ ರೀತಿಯ ಸಮಸ್ಯೆ ಎದುರಿಸುತ್ತಿರುವವರಿಗೆ ಪರಿಹಾರ ದೊರಕಬಹುದು.

Leave a Reply

error: Content is protected !!
Scroll to Top
%d bloggers like this: