ಕಂಠ ಒದ್ದೆ ಮಾಡಿಕೊಂಡು ವರ್ಷಾರಂಭ ಮಾಡುವ ಕುಡುಕರಿಗಾಗಿಯೇ ಜಾರಿಯಾಗಿದೆ ಎಣ್ಣೆ ಭಾಗ್ಯಯೋಜನೆ | ಎಷ್ಟೇ ಟೈಟ್ ಆದ್ರೂ ನಿಮ್ಮನ್ನು ಮನೆಗೆ ತಲುಪಿಸಿ, ಹೊಸ ವರ್ಷದ ವಿಶ್ ಹೇಳಲಿದೆ ಸರ್ಕಾರ !!

2021 ಎಂಬ ಕರಾಳ ವರ್ಷ ಕಳೆದು, 2022 ಎಂಬ ಹೊಸ ಆಶಾವಾದದ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಇಡೀ ವರ್ಷದಲ್ಲಿ ನಾನಾ ನಕಾರಾತ್ಮಕ ಘಟನಾವಳಿಗಳನ್ನೇ ನೋಡಿರುವ ನಾವೆಲ್ಲಾ, 2022ರಲ್ಲಿ ಹೊಸ ಹಾಗೂ ಧನಾತ್ಮಕ ಘಟನಾವಳಿಗಳಿಗೆ ಸಾಕ್ಷಿಯಾಗಲಿದ್ದೇವೆ ಎಂಬ ಭರವಸೆ ಇದೆ. ಡಿಸೆಂಬರ್‌ 31 ಬಂದರೆ ಸಾಕು ಪ್ರವಾಸ, ಪಾರ್ಟಿ ಎಂದೆಲ್ಲ ಯೋಜನೆ ರೂಪಿಸಿ ಎಂಜಾಯ್ ಮಾಡುವುದು ಸಾಮಾನ್ಯ. ಅದರಲ್ಲೂ ಕುಡುಕರಂತೂ ಎಣ್ಣೆಯ ಅಮಲಿನಲ್ಲಿ ತೇಲಲು ಹಾತೊರೆಯುತ್ತಿರುತ್ತಾರೆ. ನಿಮ್ಮ ಈ ಕನಸಿಗೆ ರೆಕ್ಕೆ ಕಟ್ಟಿದೆ ಸರ್ಕಾರದ ಈ ನಿಯಮ.

ಎಲ್ಲೆಡೆ ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ನೀಡುವ ಹಾಗೂ ಕರ್ಫ್ಯೂ ನಿಯಮಗಳ ಬಗ್ಗೆ ಕೇಳಿಬರುತ್ತಿದೆ. ಆದರೆ ಅಸ್ಸಾಂನ ಬಿಸ್ವಂತ್‌ ಜಿಲ್ಲೆಯಲ್ಲಿ ಮಾತ್ರ ಹೊಸ ವರ್ಷಾಚರಣೆಗೆ ಉತ್ತೇಜನ ನೀಡುತ್ತಿದ್ದು, ಕುಡುಕರಿಗೆ ಹೊಸದೊಂದು ಸೌಲಭ್ಯವನ್ನೂ ಒದಗಿಸುತ್ತಿದೆ. ಡ್ರಂಕ್ ಆಂಡ್ ಡ್ರೈವ್ ನಿಂದಾಗುವ ಅಪಘಾತಗಳನ್ನು ತಪ್ಪಿಸಲು ಅಸ್ಸಾಂನ ಬಿಸ್ವಂತ್ ಜಿಲ್ಲಾಡಳಿತ ಎರಡು ಸಹಾಯವಾಣಿಯನ್ನು ಸ್ಥಾಪಿಸಿದೆ. ಹೊಸವರ್ಷದಲ್ಲಿ ಮದ್ಯಪಾನ ಮಾಡಿದವರನ್ನು ಮನೆಗೆ ಬಿಡಲು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಕುಡಿತದ ಅಮಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ಮಾಡಲಾಗಿದೆ. ಹೊಸ ವರ್ಷದ ಕಾರ್ಯಕ್ರಮದಿಂದ ಕುಡುಕರನ್ನು ಅವರ ಮನೆಗಳಿಗೆ ಬಿಡಲು ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಅತಿಯಾದ ಮದ್ಯ ಸೇವನೆಯಿಂದ ಅಪಘಾತ ಸಂಭವಿಸಬಹುದು ಎಂದು ಭಾವಿಸುವ ಜನರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಡ್ರಾಪ್ ಹೋಮ್ ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 10 ವಾಹನಗಳನ್ನು ನಿಯೋಜಿಸಲಾಗಿದೆ. ಡಿಸೆಂಬರ್ 31ರಂದು ಈ ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಅಸ್ಸಾಂ ಸರ್ಕಾರದ ಈ ಯೋಜನೆಗೆ ದೇಶದಲ್ಲೆಡೆ ಮದ್ಯಪ್ರಿಯರ ಶ್ಲಾಘನೆ ವ್ಯಕ್ತವಾಗುತ್ತಿದೆ. ಇಂತಹ ಯೋಜನೆಯನ್ನು ಎಲ್ಲಾ ರಾಜ್ಯಗಳಲ್ಲೂ ಆರಂಭಿಸಬೇಕೆಂಬ ಆಗ್ರಹ ಇಂದಿನ ಪಿಡ್ಕ್ ಪಾರ್ಟಿಗಳಲ್ಲಿ ಕೇಳಿಬರಬಹುದಲ್ಲವೇ ???

Leave A Reply

Your email address will not be published.