ಹೊಸ ವರ್ಷವನ್ನು ಸ್ವಾಗತಿಸಲು ಶುರುವಾಗಿದೆ ಕೌಂಟ್ ಡೌನ್ !! | ಹಾಟ್ ಡ್ರಿಂಕ್ಸ್, ಬಿಯರ್ ಖರೀದಿಗೆ ಮುಗಿಬಿದ್ದ ಎಣ್ಣೆ ಪ್ರಿಯರು

2021 ಎಂಬ ಹಳೆಯ ಶರ್ಟು ಕಳಚಿ 2022 ರ ಹೊಚ್ಚ ಹೊಸ ಉಡುಗೆಯೊಳಗೆ ಲೇಟೆಸ್ಟ್ ಆಗಿ ಸೇರಿಕೊಳ್ಳುವ ತವಕದಲ್ಲಿದ್ದೇವೆ. ನ್ಯೂ ಇಯರ್ ಎಂದರೆ ಹಲವರಿಗೆ ಹಲವು ರೀತಿಯ ಸಂಭ್ರಮಾಚರಣೆ. ಆದರೆ ಯುವ ಜನತೆಗೆ ಮೊದಲು ನೆನಪಾಗುವುದೇ ಎಣ್ಣೆ ಪಾರ್ಟಿ. ರಾಜ್ಯದಲ್ಲಿ ಕಠಿಣ ರೂಲ್ಸ್ ಜಾರಿಯಲ್ಲಿದ್ದರೂ ಮದ್ಯಪ್ರಿಯರ ಪಾರ್ಟಿಗೇನೂ ಕಮ್ಮಿ ಇಲ್ಲ. ‌ಹೊಸ ವರ್ಷ ಆಚರಣೆಗೆ ಕೆಲ ಗಂಟೆಗಳು ಬಾಕಿ ಇರುವಾಗಲೇ ರಾಜ್ಯಾದ್ಯಂತ ಮದ್ಯದ ಕಿಕ್ ಜೋರಾಗಿದೆ. ಜನ ಮರ್ಲ್ ಕಟ್ಟಿ ಮದ್ಯ ಕೊಳ್ಳುತ್ತಿದ್ದಾರೆ. ಬೆಳಿಗ್ಗೆಯಿಂದಲೇ ದೊಡ್ಡದಾಗಿ ಬಾಗಿಲು ತೆಗೆದುಕೊಂಡ ಬಾರು ವೈನು ಶಾಪ್ ಗಳ ಮುಂದೆ ಕಿಕ್ಕಿರಿದ ಜನಸ್ತೋಮ.

ಇಂದು ಸಂಜೆಯಿಂದಲೇ ಹೊಸವರ್ಷದ ವೆಲ್ಕಮ್ ಪಾರ್ಟಿ ಗರಿಗೆದರಿದೆ. ಬಿಯರ್ ನೊರೆ ನೊರೆಯಾಗಿ ಉಕ್ಕಿ ಹರಿಯುತ್ತಿದೆ. ನಿಧಾನವಾಗಿ ವಿಸ್ಕಿ ಕಿಕ್ಕು ಹತ್ತಿಸುತ್ತಲಿದೆ. ಎಂದೂ ಕೇಳುವ ಸಂಗೀತ ಕೂಡ ಇವತ್ತು ಸದ್ದು ಹೆಚ್ಚಿಸಿಕೊಂಡಿದೆ.

ಮದ್ಯದಂಗಡಿಗಳಲ್ಲಿ ಮದ್ಯ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಇವತ್ತು ಒಂದೇ ದಿನದಲ್ಲಿ ದಾಖಲೆಯ 170 ಕೋಟಿ ರೂ. ಮೌಲ್ಯದ ಮದ್ಯ ವಹಿವಾಟು ನಡೆಯುವ ನಿರೀಕ್ಷೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಾಟ್ ಡ್ರಿಂಕ್ಸ್ ಹಾಗೂ ಬಿಯರ್ ಮಾರಾಟದಲ್ಲಿ ತುಸು ಹೆಚ್ಚಳವಾಗಿದೆ.

ಕಳೆದ ವರ್ಷ 2020ರ ಡಿ.31ರಂದು ಮದ್ಯ ಮಾರಾಟದಿಂದ 150.94 ಕೋಟಿ ರೂಪಾಯಿಯ ಮದ್ಯ ಬಿಕರಿಯಾಗಿತ್ತು. ಅದರ ಹಿಂದಿನ ವರ್ಷ 2019ರ ಡಿ.31ರಂದು 119.97 ಕೋಟಿ ರೂ. ಮೌಲ್ಯದ 3.62 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 1.3 ಲಕ್ಷ ಬಾಕ್ಸ್ ಬಿಯರ್ ಸೇಲಾಗಿತ್ತು. 2018ರ ಡಿ.31ರಂದು 18.50 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 1.48 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಇಂದು ಇನ್ನೂ ಹಲವು ಗಂಟೆಗಳ ಭರ್ಜರಿ ಗಂಟೆಗಳು ಉಳಿದಿದ್ದು, ಮತ್ತಷ್ಟು ವ್ಯಾಪಾರ ಕಳೆಗಟ್ಟಲಿದ್ದು ಮದಿರೆಯ ಹೊಳೆ ಹರಿಯಲಿದೆ.

Leave A Reply

Your email address will not be published.