ಇನ್ಮುಂದೆ ಆಟೋ ಟ್ಯಾಕ್ಸಿ ಹತ್ತಲೂ ಬೇಕಾಗತ್ತೆ ಡಬ್ಬಲ್ ಡೋಸ್ ಲಸಿಕೆ – ಚಿಂತನೆಯಲ್ಲಿ ಬಿಬಿಎಂಪಿ

ಬೆಂಗಳೂರು: ಕೊರೋನಾ ಸೋಂಕಿನ ಹಾವಳಿ ಇದೇ ರೀತಿ ಮುಂದುವರಿದರೆ, ಇನ್ನು ಮುಂದೆ ಮನೆಯಿಂದ ಹೊರಗೆ ಕಾಲಿಟ್ಟು ಆಟೋ ಟ್ಯಾಕ್ಸಿ ಹತ್ತಲು ಎರಡು ಡೋಸ್ ಕಡ್ಡಾಯ ಆಗಲಿದೆ.

ಮಾಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳು ಮತ್ತು ಚಿತ್ರಮಂದಿರಗಳಿಗೆ ಭೇಟಿ ನೀಡುವವರಿಗೆ ಈಗಾಗಲೇ ಎರಡು ಡೋಸ್‌ ಕಡ್ಡಾಯಗೊಳಿಸಲಾಗಿದೆ. ಈಗ ಐನ್ನೂ ಮುಂದುವರಿದು ಮೆಟ್ರೋ, ಬಸ್‌ನಂತಹ ಸಾರ್ವಜನಿಕ ಸಾರಿಗೆ ಸೇವೆಗಳಲ್ಲೂ ಈ ನಿಯಮ ಜಾರಿಗೊಳಿಸಲು ಬಿಬಿಎಂಪಿ  ಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿ  ಸುವ ಗ್ರಾಹಕರಿಗೂ ಡಬಲ್‌ ಡೋಸ್‌ ಕಡ್ಡಾಯಗೊಳಿಸುವ ಯೋಚನೆ ನಡೆದಿದೆ.
“ಎರಡು ಡೋಸ್‌ ಲಸಿಕೆ ಕಡ್ಡಾಯ’ ನಿಯಮದ ವ್ಯಾಪ್ತಿಗೆ ಆಟೋ, ಟ್ಯಾಕ್ಸಿಗಳೂ ಒಳಪಡುವ ದಿನಗಳು ದೂರ ಇಲ್ಲ! ಇಂತಹದ್ದೊಂದು ಚಿಂತನೆ ಈಗಾ ಗಲೇ ಬಿಬಿಎಂಪಿ ಅಧಿಕಾರಿಗಳ ವಲಯದಲ್ಲಿ ನಡೆದಿದೆ.
ಒಮಿಕ್ರಾನ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರ ನಿಯಂತ್ರಣಕ್ಕೆ ಸದ್ಯಕ್ಕೆ ಇದು ಸಾರ್ವಜನಿಕ ಸ್ಥಳಗಳಲ್ಲಿ ಎರಡೂ ಡೋಸ್‌ ಕಡ್ಡಾಯಗೊಳಿಸಲಾಗಿದೆ. ಆಟೋ ಮತ್ತು ಟ್ಯಾಕ್ಸಿಯಲ್ಲೂ ಇದನ್ನು ಪರಿಚಯಿ ಸುವ ಆಲೋಚನೆ ಇದೆ.

ಮುಂಬರುವ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಸರ್ಕಾರದ ಸೂಚನೆ ಮೇರೆಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.ಅಲ್ಲದೆ, ಮನೆ ಮನೆಗೆ ಲಸಿಕೆ ಅಭಿಯಾನ ವಾರಕ್ಕೊಮ್ಮೆ ಮಾಲ್‌ಗ‌ಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಡಬಲ್‌ ಡೋಸ್‌ ಕಡ್ಡಾಯ, ಆರೋಗ್ಯ ಕಾರ್ಯಕರ್ತರಿಗೆ ಟಾರ್ಗೆಟ್ ಕೊಟ್ಟು ಡಬ್ಬಲ್ ಡೋಸ್ ಹಾಕಿಸಲು ಪ್ರೋತ್ಸಾಹ ನೀಡಲಾಗಿದೆ.

Leave A Reply

Your email address will not be published.