ಬೆಳ್ತಂಗಡಿ: ಪೆರಾಡಿಯ ಮಹಿಳೆ ತನ್ನ ಪುತ್ರಿಯೊಂದಿಗೆ ನಾಪತ್ತೆ

ವೇಣೂರು: ಪೆರಾಡಿ ಗ್ರಾಮದ ಆಯಿಷಾ ಮಂಜಿಲ್ ನಿವಾಸಿಯ ಮಹಿಳೆ ತನ್ನ ಒಬ್ಬಳು ಮಗಳೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

ವಿದೇಶದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ತಾಜುದ್ದೀನ್ ಶೇಖ್ ರವರ ಪತ್ನಿ ಜುಬೈದಾ ಶೇಖ್ ಹಾಗೂ ಪುತ್ರಿ ಆಯಿಸಾ ಅಸ್ಮಿಯಾ ನಾಪತ್ತೆಯಾದವರು.

ಜುಬೈದಾ ಶೇಖ್ ತನ್ನ ಮೂವರು ಮಕ್ಕಳೊಂದಿಗೆ ಪೆರಾಡಿಯಲ್ಲಿ ವಾಸವಾಗಿದ್ದು,ಡಿ. 18ರಂದು ರಾತ್ರಿ ಊಟ ಮಾಡಿ ಮೂವರು ಮಕ್ಕಳೊಂದಿಗೆ ಮಲಗಿದ್ದರು.ಆದರೆ ಮರುದಿನ ಬೆಳಗ್ಗೆ ಮನೆಯವರು ಎದ್ದು ನೋಡಿದ ಸಂದರ್ಭದಲ್ಲಿ ಮಗಳು ಮತ್ತು ತಾಯಿ ಮನೆಯಿಂದ ನಾಪತ್ತೆಯಾಗಿದ್ದರು.ಕಾಣೆಯಾಗಿರುವ ಮಹಿಳೆ 5.3 ಅಡಿ ಎತ್ತರವಿದ್ದು ತುಳು, ಕನ್ನಡ, ಹಿಂದಿ, ಉರ್ದು ಭಾಷೆ ಬಲ್ಲವರಾಗಿದ್ದಾರೆ.

ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಮಹಿಳೆ ಹಾಗೂ ಬಾಲಕಿಯ ಪತ್ತೆಕಾರ್ಯ ನಡೆಯುತ್ತಿದೆ.ಅವರ ನಾಪತ್ತೆಯ ಹಿಂದಿರುವ ಕಾರಣ ತನಿಖೆ ಮೇಲಷ್ಟೇ ತಿಳಿಯಬೇಕಿದೆ.

Leave A Reply

Your email address will not be published.