ಉಡುಪಿ: ಮಿಕ್ಸಿಯಲ್ಲಿ ಪ್ರವಹಿಸಿದ ವಿದ್ಯುತ್, ವ್ಯಕ್ತಿ ಸಾವು

Share the Article

ಮಿಕ್ಸಿಯನ್ನು ದುರಸ್ತಿ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ಬಡಗುಬೆಟ್ಟು ಗ್ರಾಮದ ಒಳಕಾಡು ಎಂಬಲ್ಲಿ ನಡೆದಿದೆ.

ಮೃತರನ್ನು ಒಳಕಾಡು ನಿವಾಸಿ ಚಂದ್ರ ಜೋಗಿ (43) ಎಂದು ಗುರುತಿಸಲಾಗಿದೆ.

ಇವರು ಬ್ರಹ್ಮಾವರ ಖಾಸಗಿ ಶಾಲಾ ಬಸ್ಸಿನ ಚಾಲಕರಾಗಿದ್ದು, ಮನೆಯಲ್ಲಿ ಊಟಕ್ಕೆ ಚಟ್ನಿ ತಯಾರಿಸಲು ಮಿಕ್ಸಿ ಆನ್ ಮಾಡಿದ್ದರು. ಆಗ ಮಿಕ್ಸಿಯ ವಿದ್ಯುತ್ ಪ್ರವಾಹ ತಂತಿಯಲ್ಲಿ ತೊಂದರೆ ಇರುವುದನ್ನು ಇವರು ಸರಿಪಡಿಸಲು ಮುಂದಾದರು.

ಈ ವೇಳೆ ವಿದ್ಯುತ್ ಶಾಕ್‌ಗೆ ಒಳಗಾಗಿ ತೀವ್ರವಾಗಿ ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply