‘ತಾಯಿಯ ಗರ್ಭ, ಸತ್ತ ಮೇಲೆ ಸಮಾಧಿ ಬಿಟ್ಟು ಹೆಣ್ಣು ಬೇರೆಲ್ಲೂ ಸುರಕ್ಷಿತಳಲ್ಲ…’ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ವಿದ್ಯಾರ್ಥಿನಿ !!

ಪ್ರತಿಯೊಂದು ಹೆಣ್ಣಿನ ಕಷ್ಟ, ನೋವು ಒಂದು ಹೆಣ್ಣಿಗೆ ಮಾತ್ರ ತಿಳಿಯುವುದು. ಒಂದು ಹೆಣ್ಣು ಎಷ್ಟೆಲ್ಲಾ ನೋವು ತಿಂದರೂ ಸಹಿಸಿಕೊಂಡು ತಾಳಲು ಅಸಾಧ್ಯವಾದಾಗ ‘ಆತ್ಮಹತ್ಯೆ’ಎಂಬ ಬಂಧನವನ್ನು ಗಟ್ಟಿ ಮಾಡಿಕೊಳ್ಳುತ್ತಾಳೆ. ಇಷ್ಟೆಲ್ಲಾ ಮುಂದುವರಿದ ಸಮಾಜದಲ್ಲಿ ನೆಮ್ಮದಿಯಾಗಿ ಇದ್ದಾರೆ ಎಂದ ಕೂಡಲೇ ಅಲ್ಲೋ ಇಲ್ಲೋ ಒಂದು ಮೂಲೆಯಲ್ಲಿ ಅಳಲು ಕೇಳಿಬರುತ್ತದೆ. ಇದೇ ಪ್ರಪಂಚ…

ಹೌದು. ಇದಕ್ಕೆಲ್ಲ ಸಾಕ್ಷಿ ಎಂಬಂತೆ ಎಲ್ಲಾ ಹೆಣ್ಣು ಮಕ್ಕಳ ನೋವನ್ನು ಈಕೆ ತನ್ನ ಸಾವಲ್ಲೂ ತೋರ್ಪಡಿಸಿದ್ದಾಳೆ.ಈ ಘಟನೆ ಚೆನ್ನೈನಲ್ಲಿ ನಡೆದಿದ್ದು, ಪ್ರತಿದಿನದ ನೋವು, ಹಿಂಸೆ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ತನ್ನ ಪ್ರಾಣ ಬಿಟ್ಟಿದ್ದಾಳೆ.

ಪ್ರಾಧ್ಯಾಪಕನೊಬ್ಬನಿಂದ ಲೈಂಗಿಕ
ಕಿರುಕುಳ ಅನುಭವಿಸುತ್ತ ಹಿಂಸೆ ತಾಳದೇ ಆತ್ಮಹತ್ಯೆಗೆ ಶರಣಾದ ಬಾಲಕಿಯ ಕೊನೆಯ ಮನದಾಳದ ನೋವಿನ ಮಾತಿದು.’ಸಾಯುವುದು ಬಿಟ್ಟು ನನಗೇನೂ ತೋರುತ್ತಿಲ್ಲ.ಹೆಣ್ಣು ಎಲ್ಲಿಯೂ ಸುರಕ್ಷಿತವಾಗಿಲ್ಲ. ತಾಯಿ ಗರ್ಭ, ಸಮಾಧಿಯಷ್ಟೇ ಸುರಕ್ಷಿತವಾದ ಜಾಗ’ ಹೀಗೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದು ಮನೆಯಲ್ಲಿಯೇ ನೇಣು ಬಿಗಿದುಕೊಂಡ ಘಟನೆ ಈಗ ಬೆಳಕಿಗೆ ಬಂದಿದೆ.

ಚೆನ್ನೈನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ತನ್ನ ಡೆತ್ ನೋಟ್‌ ನಲ್ಲಿ ಇಡೀ ಹೆಣ್ಣು ಜನ್ಮದ ನೋವನ್ನ ಹೇಳಿದ್ದು,’ಇಂಥ ಲೈಂಗಿಕ ಕಿರುಕುಳ ಇನ್ನಾದರೂ ನಿಲ್ಲಲಿ. ಶಾಲೆ ಸೇರಿದಂತೆ ಯಾವುದೂ ಹೆಣ್ಣಿಗೆ ಸುರಕ್ಷಿತವಾಗಿಲ್ಲ, ಈ ಸಮಾಜವನ್ನೂ ನಂಬಬೇಡಿ…’ ಎಂದು ಬರೆದಿರುವ ಬಾಲಕಿ, ತನ್ನ ಸಾವಿಗೆ ಯಾರು ಕಾರಣರು ಎಂದು ನಿಖರವಾಗಿ ಉಲ್ಲೇಖಿಸಿಲ್ಲ. ಆದರೆ ಆಕೆಯ
ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಆಗಿರುವುದು ಪತ್ರದಿಂದ ತಿಳಿದುಬಂದಿದೆ.

ಪಡಂಬಾಕ್ಕಂನ ಸರ್ಕಾರಿ ಶಾಲೆಯ ಈ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಕೂಡಲೇ, ಕಾಲೇಜಿನ ಇತರ ವಿದ್ಯಾರ್ಥಿನಿಯರು ಕಾಲೇಜಿನ ಪ್ರೊಫೆಸರ್ ಅಬ್ರಹಾಂ ಅಲೆಕ್ಸ್ ವಿರುದ್ಧವೇ ಪ್ರತಿಭಟನೆ ಮಾಡಿದ್ದು,ಪ್ರೋಫೆಸರ್ ವರ್ತನೆ ಸರಿಯಿಲ್ಲ ಅಂತಲೂ ದೂರಿದ್ದಾರೆ.ಈತ ಪದೇ ಪದೇ ಡಬಲ್ ಮೀನಿಂಗ್ ಎನ್ನಿಸುವ ಅಸಹ್ಯ ಜೋಕ್ ಮಾಡುವ ಜತೆಗೆ ವಿದ್ಯಾರ್ಥಿನಿಯರ ಜತೆ ತೀರಾ ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದಾಗಿ ಆರೋಪಿಸಲಾಗಿದೆ. ಈ ಮೊದಲೇ ಈತನ ವಿರುದ್ಧ ದೂರಿದ್ದರೂ ಕಾಲೇಜಿನ ಆಡಳಿತ ಮಂಡಳಿ ಕ್ರಮ
ತೆಗೆದುಕೊಳ್ಳಲಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯಿಂದ ಸದ್ಯ ಪೊಲೀಸರು 48 ವರ್ಷದ ಫ್ರೊಫೆಸರ್ ನ್ನ ಬಂಧಿಸಿ ಕೇಸ್ ದಾಖಲಿಸಿದ್ದಾರೆ.

ಒಟ್ಟಾರೆ ಎಂದು ನೆಮ್ಮದಿ ಕಾಣುವುದೋ ಈ ಪ್ರಪಂಚ. ಹೆಣ್ಣಿಗೆ ಎಲ್ಲಿ ಸ್ವತಂತ್ರ ಸಿಗುವುದೋ.. ಬಹುಶಃ ಆಕೆಯ ಅಕ್ಷರದಲ್ಲಿ ಗೀಚಿದ ನೋವಿನಂತೆ ಅಮ್ಮನ ಗರ್ಭದಲ್ಲೋ,ಚಟ್ಟ ಏರಿದ ಮೇಲೋ ಏನು..!!

Leave A Reply

Your email address will not be published.