ದತ್ತಮಾಲಾಧಾರಿಗಳು ಕುಡಿದು ಗಲಾಟೆ ಮಾಡ್ತಾರೆ ಎಂದು ಮದ್ಯ ಮಾರಾಟ ನಿಷೇಧಿಸಿದ ಹಾಸನ ಜಿಲ್ಲಾಧಿಕಾರಿ | ಸಿಟಿ ರವಿ ಭಿಕ್ಷಾಟನೆ; ಕ್ಷಮೆಯಾಚಿಸುವಂತೆ ಹಾಸನ ಜಿಲ್ಲಾಧಿಕಾರಿಗೆ ಒತ್ತಾಯ

ದತ್ತಮಾಲಾಧಾರಿಗಳನ್ನ ಕುಡುಕರೆಂಬಂತೆ ಬಣ್ಣಿಸಿರುವ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಿಟಿ ರವಿ ಕಿಡಿ ಚೆಲ್ಲಿದ್ದಾರೆ.
ಜಿಲ್ಲಾಧಿಕಾರಿಯವರು ಬಳಸಿರುವ ಭಾಷೆ ಗೌರವ ತರುವಂತದಲ್ಲ. ಅದನ್ನ ನಾನು ಖಂಡಿಸುತ್ತೇನೆ. ಅವಹೇಳನ-ಅಪಮಾನ ಮಾಡುವ ರೀತಿ ಡಿಸಿ ಸರ್ಕ್ಯೂಲರ್ ಹೊರಡಿಸಿದ್ದಾರೆ ಎಂದವರು ದೂರಿದ್ದಾರೆ.

ದತ್ತಮಾಲಾಧಾರಿಗಳನ್ನ ಕುಡುಕರೆಂಬಂತೆ ಬಣ್ಣಿಸಿರುವ ಹಾಸನ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ ಸಿಟಿ ರವಿ, ಬಳಸಿರುವ ಭಾಷೆ ಗೌರವ ತರುವಂತದಲ್ಲ. ಅದನ್ನ ನಾನು ಖಂಡಿಸುತ್ತೇನೆ. ಅವಹೇಳನ-ಅಪಮಾನ ಮಾಡುವ ರೀತಿ ಡಿಸಿ ಸರ್ಕ್ಯೂಲರ್ ಹೊರಡಿಸಿದ್ದಾರೆ. ಆ ರೀತಿ ಸರ್ಕ್ಯೂಲರ್ ಹೊರಡಿಸಿರುವ ಡಿಸಿ ಅವರಿಗೆ ತಪ್ಪು ಕಲ್ಪನೆ ತೋರಿಸುತ್ತದೆ. ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸುತ್ತೇನೆ ಅಂತಾ ಸಿಟಿ ರವಿ ಹೇಳಿದ್ದಾರೆ.

ಸಾವಿರಾರು ದತ್ತಮಾಲಾಧಾರಿಗಳು ಬೇಲೂರು ಮೂಲಕ ಚಿಕ್ಕಮಗಳೂರಿನ ದತ್ತಪೀಠಕ್ಕೆ ಹೋಗಲಿದ್ದು, ಬರುವಾಗ ವಾಹನಗಳನ್ನ ನಿಲ್ಲಿಸಿಕೊಂಡು ಮದ್ಯ ಸೇವನೆ ಮಾಡಿಕೊಂಡು, ಅನ್ಯ ಧರ್ಮಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಘೋಷಣೆ ಕೂಗು ಹಾಕುವ ಸಾಧ್ಯತೆಯಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಬೇಲೂರು ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಹಾಸನ ಡಿಸಿ ಆದೇಶ ಮಾಡಿದ್ದರು. ಇದು ರಾಜ್ಯಾದ್ಯಂತ ಇರುವ ದತ್ತಮಾಲಾಧಾರಿಗಳಲ್ಲಿ ಆಕ್ರೋಶ ಹೆಚ್ಚುವಂತೆ ಮಾಡಿತ್ತು.

ನಿನ್ನೆ ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಭಿಕ್ಷಾಟನೆ ನಡೆಸಿದರು. ಚಿಕ್ಕಮಗಳೂರು ನಗರದ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆಯಲ್ಲಿ ಇತರೆ ದತ್ತಮಾಲಾಧಾರಿಗಳ ಜೊತೆ ಸಿಟಿ ರವಿ ಪಡಿ ಸಂಗ್ರಹಿಸಿದರು. ಈ ವೇಳೆ ಅಕ್ಕಿ, ಬೆಲ್ಲ, ಎಲೆ, ಅಡಿಕೆ, ಕೊಬ್ಬರಿ, ಬಾಳೆಹಣ್ಣುಗಳನ್ನ ದತ್ತಮಾಲಾಧಾರಿಗಳಿಗೆ ಸ್ಥಳೀಯರು ನೀಡಿದರು.
ದತ್ತಾತ್ರೇಯರನ್ನ ಅವಧೂತ ಪರಂಪರೆ ಅಂತಾ ಗುರುತಿಸಲಾಗುತ್ತದೆ. ಅವಧೂರ ಪರಂಪರೆಯವರು ಭಿಕ್ಷಾಟನೆ ಮಾಡಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ದತ್ತಜಯಂತಿ ಹಿನ್ನೆಲೆಯಲ್ಲಿ ನಾವು ಭಿಕ್ಷಾಟನೆ ಮಾಡಿದ್ದೇವೆ, ನಾಳೆ ದತ್ತಾತ್ರೇಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದೇವೆ ಎಂದು ಬಿಜೆಪಿ ನಾಯಕ ಸಿಟಿ ರವಿ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.

Leave A Reply

Your email address will not be published.