ಕಿನ್ನಿಗೋಳಿ: ಚಪ್ಪಲಿ ಖರೀದಿಗೆ ಅಂಗಡಿಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ!! ಭುಜ, ಎದೆ ಮುಟ್ಟಿದ ಅಂಗಡಿ ಮಾಲೀಕ ಸಂಶುದ್ದೀನ್!!

ಚಪ್ಪಲಿ ಖರೀದಿಗೆಂದು ಅಂಗಡಿಗೆ ಬಂದಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುಲ್ಕಿ ಠಾಣಾ ಪೊಲೀಸರು ಆರೋಪಿ ಅಂಗಡಿ ಮಾಲೀಕ ಸಂಶುದ್ದೀನ್ ನನ್ನು ಬಂಧಿಸಿದ್ದಾರೆ.

ಘಟನೆ ವಿವರ:ನಿನ್ನೆ ಮಧ್ಯಾಹ್ನ ವೇಳೆಗೆ ಕಿನ್ನಿಗೋಳಿ ಎಂಬಲ್ಲಿ ಚಪ್ಪಲಿ ಖರೀದಿಗೆಂದು ಅಂಗಡಿಗೆ ಗ್ರಾಹಕಿ ಮಹಿಳೆ ಬಂದಿದ್ದರು. ಈ ವೇಳೆ ಅಂಗಡಿ ಮಾಲೀಕ ವಿವಿಧ ತರದ ಚಪ್ಪಲಿಗಳನ್ನು ತೋರಿಸಿದ್ದು, ಇನ್ನೊಂದ್ ಕಾಪಾರ್ಟ್ ಮೆಂಟ್ ನಲ್ಲಿ ಬೇರೆ ವಿಧದ ಚಪ್ಪಲಿಗಲಿದೆ ತೋರಿಸುತ್ತೇನೆ ಎಂದು ಕರೆದುಕೊಂಡು ಹೋಗಿ ಮಹಿಳೆಯ ಭುಜ ಹಾಗೂ ಎದೆಯ ಭಾಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಘಟನೆಯ ಬಗ್ಗೆ ಮಹಿಳೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿ ಅಂಗಡಿ ಮಾಲೀಕ ಸಂಶುದ್ದೀನ್ ನನ್ನು ಬಂಧಿಸಿದ್ದಾರೆ.

Leave A Reply

Your email address will not be published.