ಇನ್ನು ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ತುಂಬಾ ಸುಲಭ | ಜಸ್ಟ್ ಒಂದು ಮಿಸ್ ಕಾಲ್ ಕೊಡಿ, ಬುಕಿಂಗ್ ಮಾಡಿ!!

ಎಲ್‌ಪಿಜಿ ಸಿಲಿಂಡರ್‌ ಬುಕ್ ಮಾಡಲು ಅದೆಷ್ಟೋ ಜನ ಪರದಾಡಿದ್ದು ಉಂಟು. ಬುಕಿಂಗ್ ಬಗ್ಗೆ ತಿಳಿಯದೆ ಇನ್ನೊಬ್ಬರ ಸಹಾಯ ಪಡೆದು ಬುಕ್ಕಿಂಗ್ ಮಾಡಿ ವ್ಯಥೆ ಪಡುತಿರೋರಿಗೆ ಇಲ್ಲಿದೆ ಖುಷಿಯ ವಿಚಾರ.ಹೌದು. ಇನ್ನು ಮುಂದೆ ಈಗ ಎಲ್‌ಪಿಜಿ ಸಿಲಿಂಡರ್‌ ಕಾಯ್ದಿರಿಸುವುದು ತುಂಬಾನೇ ಸರಳ. ಒಂದು ಮಿಸ್ ಕಾಲ್ ನಿಂದ ಸಿಲಿಂಡರ್ ನಿಮ್ಮ ಮನೆ ಬಾಗಿಲು ಸೇರಬಹುದು.


ನೀವು ಮಿಸ್ಡ್ ಕಾಲ್ ಮಾಡುವ ಮೂಲಕ ದೇಶದ ಯಾವುದೇ ಭಾಗದಲ್ಲಿ ನಿಮ್ಮ LPG ಸಿಲಿಂಡರ್ ಅನ್ನು ಬುಕ್ ಮಾಡಬಹುದು. ಈ ವರ್ಷದ ಫೆಬ್ರವರಿಯಲ್ಲಿಯೇ ಮಿಸ್ಡ್ ಕಾಲ್ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ ಮಾಡುವ ಸೌಲಭ್ಯವನ್ನ ಐಒಸಿ ಆರಂಭಿಸಿತ್ತು. ಈ ಹಿಂದೆ ಗ್ರಾಹಕರು ಕಸ್ಟಮರ್ ಕೇರ್‌ಗೆ ಹೋಗಿ ಕರೆಯನ್ನು ಬಹಳ ಸಮಯ ಹೋಲ್ಡ್‌ನಲ್ಲಿ ಇಡಬೇಕಾಗಿತ್ತು. ಆದ್ರೆ, ಈಗ ಹಾಗೆ ಮಾಡುವ ಅಗತ್ಯವಿಲ್ಲ. ಕೇವಲ ಒಂದು ಮಿಸ್ಡ್ ಕಾಲ್ ಮತ್ತು ಗ್ಯಾಸ್ ಸಿಲಿಂಡರ್ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ವಾಸ್ತವವಾಗಿ ಈ ಸೇವೆಯನ್ನು ಇಂಡಿಯನ್ ಆಯಿಲ್ (IOC) ತನ್ನ ಗ್ರಾಹಕರಿಗೆ ಒದಗಿಸುತ್ತದೆ.ಇದಕ್ಕಾಗಿ ಐಒಸಿ ತನ್ನ ಎಲ್‌ಪಿಜಿ ಗ್ರಾಹಕರಿಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಮಿಸ್ಡ್ ಕಾಲ್‌ಗಾಗಿ ಐಒಸಿ ಸಂಖ್ಯೆಯನ್ನು ನಮೂದಿಸಿದೆ, ಅದು 8454955555 ಆಗಿದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಈ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನೀವು ಹೊಸ ಗ್ಯಾಸ್ ಸಂಪರ್ಕವನ್ನು ಬುಕ್ ಮಾಡಬಹುದು ಎಂದು ಐಒಸಿ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಉತ್ತಮ ಭಾಗವೆಂದರೆ ಗ್ರಾಹಕರು ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಮಿಸ್ಡ್ ಕಾಲ್ ಹೊರತಾಗಿ, ಗ್ಯಾಸ್ ಬುಕ್ ಮಾಡುವ ಇತರ ಮಾರ್ಗಗಳಿದ್ದು, IOC, HPCL ಮತ್ತು BPCL ನ ಗ್ರಾಹಕರು SMS ಮತ್ತು Whatsapp ಮೂಲಕ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು.

ಐಒಸಿ ಗ್ರಾಹಕರಾಗಿದ್ದರೆ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7718955555 ಗೆ ಕರೆ ಮಾಡುವ ಮೂಲಕ ನೀವು LPG ಗ್ಯಾಸ್ ಸಿಲಿಂಡರ್‌ʼನ್ನ ಬುಕ್ ಮಾಡಬಹುದು. ಇನ್ನೊಂದು ಮಾರ್ಗವೆಂದರೆ ವಾಟ್ಸಾಪ್ʼನಲ್ಲಿ ನೀವು REFILL ಬರೆಯುವ ಮೂಲಕ 7588888824 ನಲ್ಲಿ ಮಾಡಬಹುದು. ಗ್ಯಾಸ್ ಸಿಲಿಂಡರ್ ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

Leave A Reply

Your email address will not be published.