ಬೆಳ್ತಂಗಡಿ : ಉಜಿರೆಯಲ್ಲಿ ಚರಂಡಿಗೆ ಪಲ್ಟಿ ಹೊಡೆದ ಕಾರು, ಮಹಿಳೆ ಗಂಭೀರ ಗಾಯ

ಬೆಂಗಳೂರಿನಿಂದ ಧರ್ಮಸ್ಥಳ ದೇವಸ್ಥಾನಕ್ಕೆ ಬರುತ್ತಿದ್ದ ಸ್ವಿಫ್ಟ್ ಕಾರೊಂದು ರಾತ್ರಿ ಸುಮಾರು 1:45 ರ ವೇಳೆಗೆ ಉಜಿರೆ ರಾಜ್ ಲೀಲಾ ರೆಸಿಡೆನ್ಸಿ ಮುಂಭಾಗದ ಚರಂಡಿಗೆ ಪಲ್ಟಿ ಹೊಡೆದಿದೆ.

ನಿದ್ರೆಯ ಮಂಪರಿನಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮಹಿಳೆಗೆ ಮಾತ್ರ ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

Leave A Reply

Your email address will not be published.