ವಿಶ್ವದೆದುರು ಮತ್ತೊಮ್ಮೆ ಬೆತ್ತಲಾದ ಪಾಕಿಸ್ತಾನ !!| ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ನಾಲ್ವರು ಯುವತಿಯರಿಗೆ ಥಳಿಸಿ, ನಗ್ನ ಮೆರವಣಿಗೆ ಮಾಡಿ ಅಮಾನವೀಯತೆ ಮೆರೆದ ಜನತೆ

ಕಳ್ಳತನ ಎಂಬುದು ಎಲ್ಲಾ ಕಡೆಗಳಲ್ಲೂ ಇತ್ತೀಚೆಗೆ ಮಾಮೂಲಿಯಾಗಿ ಹೋಗಿದೆ. ಮನೆ, ಶಾಲೆ, ಶಾಪಿಂಗ್ ಮಾಲ್, ಚಿಕ್ಕ-ಚಿಕ್ಕ ಅಂಗಡಿಗಳು, ಶ್ರೀಮಂತರ ಮನೆಗಳಲ್ಲಿ ಆಗಾಗ್ಗೆ ಕಳ್ಳತನ ನಡೆಯುತ್ತಲೇ ಇರುತ್ತದೆ. ಎಲ್ಲಾದರೂ ಕಳ್ಳ ಸಿಕ್ಕಿ ಬಿದ್ದರೆ ಆತನನ್ನು ತಕ್ಷಣ ಪೊಲೀಸರಿಗೆ ಒಪ್ಪಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಕಳ್ಳತನ ಮಾಡಿದ್ದಾರೆಂದು ಅವರನ್ನು ತುಂಬಾನೇ ಅಮಾನವೀಯವಾಗಿ ನಡೆಸಿಕೊಂಡ ಘಟನೆ ನಡೆದಿದೆ.

ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಗುಂಪೊಂದು ಅಪ್ರಾಪ್ತ ಬಾಲಕಿ ಸೇರಿದಂತೆ ನಾಲ್ವರು ಯುವತಿಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ನಡೆದಿದೆ.

ಈ ಘಟನೆ ಲಾಹೋರ್ ನಿಂದ 180 ಕಿಲೋ ಮೀಟರ್ ದೂರದಲ್ಲಿರುವ ಫೈಸಲಾಬಾದ್ ಎಂಬಲ್ಲಿ ನಡೆದಿದೆ. ನಾಲ್ವರು ಯುವತಿಯರನ್ನು ನಗ್ನಗೊಳಿಸಿ, ಥಳಿಸಿದ ನಂತರ ಸುತ್ತಲೂ ನೆರೆದಿದ್ದ ಜನರ ಬಳಿ ಮಾನ ಮುಚ್ಚಿಕೊಳ್ಳಲು ಬಟ್ಟೆಯ ತುಂಡನ್ನು ಕೊಡಿ ಎಂದು ಯುವತಿಯರು ಅಲವತ್ತುಕೊಂಡಿರುವ ದೃಶ್ಯ ವೈರಲ್ ಆದ ವೀಡಿಯೋದಲ್ಲಿ ಕಂಡುಬಂದಿರುವುದಾಗಿ ವರದಿ ಹೇಳಿದೆ.

ಯುವತಿಯರು ತಮ್ಮನ್ನು ಬಿಟ್ಟು ಬಿಡಿ ಎಂದು ಜನರಲ್ಲಿ ಅಂಗಲಾಚುತ್ತಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಒಬ್ಬ ಮನುಷ್ಯ ಕೂಡ ಅವರ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಮೂಕಪ್ರೇಕ್ಷಕರಂತೆ ಆ ಅಮಾನವೀಯ ದೃಶ್ಯಗಳನ್ನು ನೋಡುತ್ತಾ ನಿಂತಿದ್ದರು. ನಂತರ ಸುಮಾರು ಒಂದು ಗಂಟೆಗಳ ಕಾಲ ಯುವತಿಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಲಾಗಿತ್ತು ಎಂದು ತಿಳಿದುಬಂದಿದೆ.

ಯುವತಿಯರನ್ನು ನಗ್ನಗೊಳಿಸಿ ಥಳಿಸಿದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪಾಕಿಸ್ತಾನದ ಪಂಜಾಬ್ ಪೊಲೀಸರು ತನಿಖೆ ನಡೆಸಿದ್ದು, ಐವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ವಕ್ತಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಈ ನಾಲ್ವರು ಯುವತಿಯರು ಫೈಸಲಾಬಾದ್ ನ ಬಾವಾ ಚಾಕ್ ಮಾರುಕಟ್ಟೆ ಪ್ರದೇಶದಲ್ಲಿ ತ್ಯಾಜ್ಯ ವಸ್ತು ಸಂಗ್ರಹಕ್ಕೆ ತೆರಳಿದ್ದರು. ಬಾಯಾರಿಕೆಯಿಂದಾಗಿ ಇವರು ಉಸ್ಮಾನ್ ಎಲೆಕ್ಟ್ರಿಕ್ ಸ್ಟೋರ್ ಗೆ ತೆರಳಿ ಒಂದು ಬಾಟಲು ನೀರು ಕೇಳಿದ್ದರು. ಆದರೆ ಅಂಗಡಿ ಮಾಲೀಕ ಸದ್ದಾಂ, ನೀವೆಲ್ಲಾ ಕಳವು ಮಾಡಲು ಬಂದಿದ್ದೀರಿ ಎಂದು ಆರೋಪಿಸಿ ಹಿಗ್ಗಾಮುಗ್ಗಾ ಹೊಡೆಯಲು ಆರಂಭಿಸಿದ್ದ. ಬಳಿಕ ಯುವತಿಯರನ್ನು ನಗ್ನಗೊಳಿಸಿ, ಎಳೆದೊಯ್ದು ಹಲ್ಲೆ ನಡೆಸಿರುವುದಾಗಿ ಪೊಲೀಸ್ ವಕ್ತಾರ ಮಾಹಿತಿ ನೀಡಿದ್ದಾರೆ.

ಆದರೆ ಈ ರೀತಿ ಅಮಾನವೀಯವಾಗಿ ನಡೆದುಕೊಂಡ ಪಾಕಿಸ್ತಾನದ ಜನತೆಗೆ ವಿಶ್ವದಲ್ಲೆಡೆ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ. ಮಾನವೀಯತೆ ಸತ್ತುಹೋಗಿರುವ ದೇಶದಲ್ಲಿ ಈ ರೀತಿಯ ಘಟನೆಗಳು ನಡೆಯುವುದು ವಿಶೇಷವಲ್ಲ ಎಂದು ಹಲವು ನೆಟ್ಟಿಗರು ವೈರಲ್ ಆದ ವೀಡಿಯೋದಲ್ಲಿ ಕಾಮೆಂಟ್ ಮಾಡಿದ್ದಾರೆ. ಇಂತಹ ರಾಕ್ಷಸರಿಗೆ ಕಠಿಣ ಶಿಕ್ಷೆ ಆಗಬೇಕೆಂದು ವಿಶ್ವದೆಲ್ಲೆಡೆಯಿಂದ ಒತ್ತಾಯ ಕೇಳಿಬರುತ್ತಿದೆ.

Leave A Reply

Your email address will not be published.