ಸದ್ಯದಲ್ಲೇ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ | ತಾವು ಬಯಸಿದ ಜಿಲ್ಲೆಗೆ ವರ್ಗಾವಣೆ ನೀಡಲು ಮುಂದಾಗಿದೆ ಸರ್ಕಾರ !!?

ಶಿಕ್ಷಕರಿಗೆ ಸದ್ಯದಲ್ಲಿ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಮತ್ತೊಮ್ಮೆ ತಿದ್ದುಪಡಿ ತರುವ ಮೂಲಕ ಮತ್ತಷ್ಟು ಶಿಕ್ಷಕ ಸ್ನೇಹಿಯಾಗಿ ರೂಪಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

ಶಿಕ್ಷಕರ ವರ್ಗಾವಣೆಯಲ್ಲಿ ತಾವು ಬಯಸಿದ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ನೀಡಲು ಹಾಗೂ ಶೇ.25ಕ್ಕಿಂತ ಹೆಚ್ಚು ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಲೆಕ್ಕಾಚಾರ ಹಾಕುವ ನಿಯಮವನ್ನು ತೆಗೆದು ಹಾಕಲು ಹಾಗೂ ಯಾವುದೇ ನಿಬಂಧನೆಗಳಿಲ್ಲದೆ ವರ್ಗಾವಣೆ ನೀಡುವ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ಇಲಾಖೆ ಮುಂದಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರಲ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷ ಸಂಘ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮನವಿಯ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಸಮಯದ ಅಭಾವ ಇರುವುದರಿಂದ ಚಳಿಗಾಲದ ಅಧಿವೇಶನ ಸಮಯಕ್ಕೆ ಪ್ರಸ್ತಾವನೆ ಸಲ್ಲಿಸಲು ಶಿಕ್ಷಣ ಇಲಾಖೆಗೆ ಸಾಧ್ಯವಾಗದೇ ಇರುವುದರಿಂದ, ಫೆಬ್ರವರಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲು ಇಲಾಖೆ ಆಲೋಚಿಸಿರುವುದಾಗಿ ತಿಳಿದು ಬಂದಿದೆ. ಇದಕ್ಕೂ ಮುನ್ನ ಒಂದು ಬಾರಿ ವರ್ಗಾವಣೆ ನೀಡುವುದಾದರೆ, ಎಷ್ಟು ಶಿಕ್ಷಕರಿಗೆ ನೀಡಬೇಕು? ಇದರಿಂದ ಖಾಲಿಯಾಗುವ ಸ್ಥಳವನ್ನು ಯಾವ ರೀತಿಯಲ್ಲಿ ಭರ್ತಿ ಮಾಡಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ಕಾನೂನು ಅಭಿಪ್ರಾಯ ಸಂಗ್ರಹಿಸಿ ಆನಂತರ ಪ್ರಸ್ತಾವನೆ ಸಲ್ಲಿಸಲಿ

ಸೇವಾ ಅವಧಿಯಲ್ಲಿ ಶಿಕ್ಷಕರು ಒಂದು ಬಾರಿಗೆ ವರ್ಗಾವಣೆ ಬಯಸುವ ಜಿಲ್ಲೆಗೆ ಪರಸ್ಪರ ವರ್ಗಾವಣೆಗೆ ಮುಕ್ತ ಅವಕಾಶ ಕಲ್ಪಿಸುವ ಸಂಬಂಧ ಈ ಹಿಂದೆಯೇ ಆಸಕ್ತ ಶಿಕ್ಷಕರಿಂದ ಅಂಕಿ ಅಂಶಗಳನ್ನು ಶಿಕ್ಷಣ ಇಲಾಖೆ ಕಲೆಹಾಕಿದೆ. ಆ ಪ್ರಕಾರವಾಗಿ 6ರಿಂದ 7 ಸಾವಿರ ಶಿಕ್ಷಕರು ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ಪಡೆಯಲು ಇಂಗಿತ ವ್ಯಕ್ತಪಡಿಸಿದ್ದರು. ಸದ್ಯದ ನಿಯಮದ ಪ್ರಕಾರ ಶೇ.25ಕ್ಕಿಂತ ಹೆಚ್ಚು ಶಿಕ್ಷಕರ ಕೊರತೆ ಇರುವ ತಾಲೂಕಿನಿಂದ ಹೊರ ಹೋಗಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಶಿಕ್ಷಕರ ವರ್ಗಾವಣೆಯಲ್ಲಿ ನಿಯಮಕ್ಕೆ ತಿದ್ದುಪಡಿ ತಂದು ಶೇ.25 ಎಂಬ ಲೆಕ್ಕಾಚಾರವನ್ನು ಅಂಕಿ ‌ಅಂಶಗಳ ಬದಲಾಗಿ ಮಂಜೂರಾದ ಹುದ್ದೆಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.

Leave A Reply

Your email address will not be published.