ಮನೆ ಕಟ್ಟಲು ಹೊರಟವರಿಗೆ ಕಾದಿದೆ ಶಾಕಿಂಗ್ ನ್ಯೂಸ್ | ಸದ್ಯದಲ್ಲೇ 400 ರೂ. ಗಡಿ ಮುಟ್ಟಲಿದೆ ಒಂದು ಚೀಲ ಸಿಮೆಂಟ್ ರೇಟ್ !!

ಮನೆ ಕಟ್ಟಲು ಅಥವಾ ಯಾವುದೇ ಕಟ್ಟಡ ಕಟ್ಟಲು ಹೊರಟವರಿಗೆ ಬಿಗ್ ಶಾಕಿಂಗ್ ನ್ಯೂಸ್ ಒಂದಿದೆ. ಕಟ್ಟಡ ನಿರ್ಮಾಣ ಚಟುವಟಿಕೆಯ ಪ್ರಮುಖ ಕಚ್ಚಾವಸ್ತುವಾದ ಸಿಮೆಂಟ್ ಬೆಲೆ ಇನ್ನು ಕೆಲ ತಿಂಗಳಿನಲ್ಲಿ ಮತ್ತಷ್ಟು ಏರಿಕೆಯಾಗಲಿದೆ.

ಪ್ರತಿ ಚೀಲ ಸಿಮೆಂಟ್ ಬೆಲೆ 15-20 ರೂಪಾಯಿ ಹೆಚ್ಚಳದ ಸಾಧ್ಯತೆ ಇದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ನಿನ್ನೆ ತಿಳಿಸಿದೆ. ಸಿಮೆಂಟ್ ತಯಾರಿಕೆಗೆ ಅಗತ್ಯದ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಸಿಮೆಂಟ್ ದರ ಏರಿಕೆಗೆ ಕಾರಣವಾಗಲಿದೆ.

ಈಗ ಪ್ರಸ್ತುತವಾಗಿ 360 ರಿಂದ 380ರವರೆಗೆ ಬೆಲೆಯಲ್ಲಿರುವ ಸಿಮೆಂಟ್‌ ಬೆಲೆ 400ರೂ. ಮುಟ್ಟಲಿದೆ. ಹೀಗಾಗಿ 50 ಕೆ.ಜಿ ಇರುವ ಪ್ರತಿ ಚೀಲದ ಸಿಮೆಂಟ್ ಬೆಲೆ 400 ರೂಪಾಯಿ ಮುಟ್ಟಲಿದೆ. ಈ ಮೂಲಕ ಸಿಮೆಂಟ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.

2020ರ ವೇಳೆ ಕೊರೋನಾ ಕಾರಣಕ್ಕೆ ಸಿಮೆಂಟ್ ಬೇಡಿಕೆಯಲ್ಲಿ ಕುಸಿತವಾಗಿತ್ತು. ಆದರೆ ಈ ಆರ್ಥಿಕ ವರ್ಷದಲ್ಲಿ ಸಿಮೆಂಟ್ ಬೇಡಿಕೆ ಪ್ರಮಣ ಶೇ.11ರಿಂದ 13 ರಷ್ಟು ಏರಿಕೆಯಾಗಿದೆ. ವಿದೇಶದಿಂದ ತರಿಸಲಾಗಿದ್ದ ಕಲ್ಲಿದ್ದಲು ಶೇ.120ಕ್ಕಿಂತ ಹೆಚ್ಚು ಮತ್ತು ಪೆಟ್‍ಕೋಕ್ ದರದ ಶೇ.80 ರಷ್ಟು ಏರಿಕೆ. ಇದರಿಂದ ವಿದ್ಯುತ್‌ ಮತ್ತು ಇಂಧನ ಬೆಲೆಗಳು ಪ್ರತೀ ಟನ್‍ಗೆ 350 ರಿಂದ 400 ರೂಪಾಯಿ ಜಿಗಿಯುವ ಸಾಧ್ಯತೆ ಇದೆ.

Leave A Reply

Your email address will not be published.