ಹಾವು ಮತ್ತು ಹಲ್ಲಿಯ ನಡುವಿನ ಈ ಸಮರದಲ್ಲಿ ಗೆಲ್ಲುವವರಾರು?? | ಹಾವೇ ಬೆಚ್ಚಿ ಬಿತ್ತು ಈ ಎರಡು ಹಲ್ಲಿಗಳ ಒಗ್ಗಟ್ಟಿನ ಕಾಳಗಕ್ಕೆ

ಹಾವು-ಮುಂಗುಸಿ ಕಾಳಗ ಅಥವಾ ಇಲಿ, ಹೆಗ್ಗಣ,  ಕಪ್ಪೆಯೊಂದಿಗಿನ ಕಾಳಗವನ್ನು ನೀವು ನೋಡಿರಬಹುದು. ಆದರೆ ಹಾವು ಮತ್ತು ಹಲ್ಲಿಯ ನಡುವಿನ ಕಾಳಗವನ್ನು ಎಂದಾದರೂ ನೋಡಿದ್ದೀರಾ?? ಇಲ್ಲ ಎಂದಾದರೆ ಇಂದು ನಾವು ಹಾವು ಮತ್ತು ಹಲ್ಲಿಯ ಕಾಳಗದ ವೀಡಿಯೋವನ್ನು ತೋರಿಸುತ್ತೇವೆ. ರೋಮಾಂಚನಕಾರಿಯಾಗಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. 

ವೈರಲ್ ಆಗಿರುವ ವೀಡಿಯೋದಲ್ಲಿ ವಿಷಕಾರಿ ಹಾವೊಂದು ಹಲ್ಲಿಯ ಮೇಲೆ ದಾಳಿ ಮಾಡಿರುವುದನ್ನು ನೋಡಬಹುದು. ಇದಾದ ನಂತರ ಹಲ್ಲಿ ಈ ರೀತಿ ತನ್ನ ವಿರುದ್ಧ ತಿರುಗಿ ಬೀಳಬಹುದು ಎಂದು ಹಾವು ಕೂಡಾ ಅಂದು ಕೊಂಡಿರಲಿಕ್ಕಿಲ್ಲ. ಹಲ್ಲಿ ತನಗೆ ಸುಲಭದ ಬೇಟೆ ಎಂದುಕೊಂಡಿದ್ದ ಹಾವಿಗೆ ಈ ಬೇಟೆ ದುಬಾರಿಯಾಗಿ ಪರಿಣಮಿಸಿತು. 

ಹೌದು, ಗೋಡೆಯೊಂದರ ಮೇಲೆ ಎರಡು ಹಲ್ಲಿಗಳು ಓಡಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಈ ಮಧ್ಯೆ, ಹಾವು ಒಂದು ಹಲ್ಲಿಯ ಬಳಿಗೆ ಬಂದು ಅದನ್ನು ಹಿಡಿದು ಬಿಡುತ್ತದೆ. ಹಲ್ಲಿಯ ಕುತ್ತಿಗೆಯನ್ನು ಹಿಡಿದು ತನ್ನ ದೇಹಕ್ಕೆ ಸುತ್ತಿಕೊಳ್ಳುತ್ತದೆ ಆ ಹಾವು. ಇಷ್ಟು ಮಾತ್ರವಲ್ಲದೆ ಹತ್ತಿರದಲ್ಲಿದ್ದ ಇನ್ನೊಂದು ಹಲ್ಲಿಯನ್ನು ಕೂಡಾ ಹಿಡಿಯಲು ಪ್ರಯತ್ನಿಸುತ್ತದೆ. ಅಷ್ಟರಲ್ಲಿ ಆ ಹಲ್ಲಿ ಒಮ್ಮೆಲೆ ಹಾವಿನ ಮೇಲೆ ದಾಳಿ ಮಾಡುತ್ತದೆ. ಎರಡನೇ ಹಲ್ಲಿ ವಿಷಪೂರಿತ ಹಾವಿನ ನೇರ ಕುತ್ತಿಗೆಯನ್ನು ಹಿಡಿಯುತ್ತದೆ. ಈ ಹಠಾತ್ ದಾಳಿಯಿಂದ ಹಾವು ಕೂಡಾ ಒಂದು ಕ್ಷಣ ಬೆಚ್ಚಿಬೀಳುತ್ತದೆ.

https://www.instagram.com/reel/CWixXYQl_1P/?utm_source=ig_web_copy_link

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ಭಾರೀ ಲೈಕ್ಸ್ ಪಡೆಯುತ್ತಿದೆ. ರಾಯಲ್_ಪೈಥಾನ್ಸ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.  ಜನರು ಹಾವು ಮತ್ತು ಹಲ್ಲಿಗಳ ಕಾದಾಟದ ಈ ವಿಡಿಯೋವನ್ನು ತುಂಬಾನೇ  ಇಷ್ಟಪಡುತ್ತಿದ್ದಾರೆ.

Leave A Reply

Your email address will not be published.