ಏಳು ಬೀದಿ ನಾಯಿಗಳು ಒಟ್ಟಾಗಿ ಸೇರಿ ಬಾಲಕನನ್ನು ಅಟ್ಟಾಡಿಸಿ ದಾಳಿ|ಬಾಲಕನಿಗೆ ತೀವ್ರವಾದ ಗಾಯ

ದಾವಣಗೆರೆ: ಬಾಲಕನೋರ್ವನನ್ನು ಸುಮಾರು ಏಳು ಬೀದಿ ನಾಯಿಗಳು ಅಟ್ಟಾಡಿಸಿ ಕಚ್ಚಿದ ಘಟನೆ ದಾವಣಗೆರೆ ನಗರದ ಬಾಷಾ ನಗರದಲ್ಲಿ ನಡೆದಿದೆ.

 

ಜಾಫರ್ ಸಾದಿಕ್(7 ವ.)ಎಂಬ ಬಾಲಕನಿಗೆ ತೀವ್ರವಾಗಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಯಿಗಳ ದಾಳಿಯಿಂದಾಗಿ ಬಾಲಕನ ಮೂಗು, ಕಣ್ಣಿನ ರೆಪ್ಪೆಗೆ ತೀವ್ರವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಈ ಸಂಬಂಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿ ನವೆಂಬರ್ 29ರಂದು ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಎಚ್ಚರಿಸಿದ್ದಾರೆ.ಇನ್ನೂ ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ತಕ್ಷಣವೇ ಇಲ್ಲಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.