ಮಂಗಳೂರು:ಕಾರ್ ಶೋರೂಮ್ ಗೆ ನುಗ್ಗಿದ ಕಾಡು ಹಂದಿ|ಆವರಣದಲ್ಲಿದ್ದ ಓರ್ವನ ಹಿಂದೆಯೇ ಓಡಿ ತಿವಿಯಲು ಯತ್ನ,ಅದೃಷ್ಟವಶಾತ್ ಪಾರು

ಮಂಗಳೂರು: ಕಾರು ಶೋರೂಂ ಆವರಣದೊಳಗೆ ಹಾಡುಹಗಲೇ ಕಾಡುಹಂದಿಯೊಂದು ನುಗ್ಗಿ ಒಬ್ಬನಿಗೆ ತಿವಿಯಲು ಯತ್ನಿಸಿ ಆತಂಕ ಸೃಷ್ಟಿಸಿದ ಘಟನೆ ನಗರದ ಪಡೀಲ್ ರೈಲ್ವೇ ಬ್ರಿಡ್ಜ್ ಸಮೀಪ ಇರುವ ಕಾರ್ ಶೋರೂಂ ನ ಆವರಣದಲ್ಲಿ ನಡೆದಿದೆ.

Ad Widget

ಈ ಘಟನೆ ಕಳೆದ ಬುಧವಾರ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳು ಸದ್ಯ ವೈರಲ್ ಆಗುತ್ತಿದೆ.ಶೋರೂಂ ಆವರಣಕ್ಕೆ ಹೆದ್ದಾರಿ ದಾಟಿ ಮುಖ್ಯದ್ವಾರದಲ್ಲೇ ಓಡಿಬಂದು ಕಾಡುಹಂದಿ ನುಗ್ಗಿದ್ದು,ಎರಡೆರಡು ಬಾರಿ ಒಡಾಡಿದೆ.

Ad Widget . . Ad Widget . Ad Widget .
Ad Widget

ಅಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿದ್ದಾರೆ.ಕಾರ್ ಶೋರೂಂ ನ ಅಲ್ಲೇ ಆವರಣದಲ್ಲಿದ್ದ ಓರ್ವನ ಹಿಂದೆಯೇ ಓಡಿ ತಿವಿಯಲು ಯತ್ನಿಸಿದೆ.ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ಕೆಲ ಸಮಯದ ಬಳಿಕ ಕಾಡು ಹಂದಿ ರಸ್ತೆ ದಾಟಿ ಪಕ್ಕದ ಕಾಡಿನ ಕಡೆಗೆ ಓಡಿ ಹೋಗಿದೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: