ಗುಂಡ್ಯ:ಕರ್ತವ್ಯನಿರತ ಮೆಸ್ಕಾಂ ಅಧಿಕಾರಿಯ ಮೇಲೆ ದರ್ಪಮೆರೆದ ಪಂಚಾಯತ್ ಉಪಾಧ್ಯಕ್ಷ!! ಅಧಿಕಾರಿ ಸಹಿತ ಸಿಬ್ಬಂದಿಗಳ ಮೇಲೆ ಹಲ್ಲೆ ಕರ್ತವ್ಯಕ್ಕೆ ಅಡ್ಡಿ

ಗುಂಡ್ಯ:ಕರ್ತವ್ಯನಿರತ ಮೆಸ್ಕಾಂ ಇಂಜಿನಿಯರ್ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಸದಸ್ಯನ ಮೇಲೆ ಪ್ರಕರಣ ದಾಖಲಾಗಿದೆ.

Ad Widget

ಘಟನೆ ವಿವರ:ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ವಿದ್ಯುತ್ ಸಂಪರ್ಕದ ಸರ್ವೆ ನಡೆಸಲು ನೆಲ್ಯಾಡಿ ಮೆಸ್ಕಾಂ ಶಾಖಾ ಇಂಜಿನಿಯರ್ ರಮೇಶ್.ಬಿ ಹಾಗೂ ಸಿಬ್ಬಂದಿಗಳಾದ ರಜಾಕ್ ಮತ್ತು ಅಡಿವೆಪ್ಪ ಮಾದರ ಎಂಬವರು ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂ.ಕೆ ಪೌಲೋಸ್ ಹಾಗೂ ಸದಸ್ಯ ಕಾರ್ತಿಕೇಯನ್ ಎಂಬವರು ಶೌಚಾಲಯ ಕಟ್ಟಡಕ್ಕೆ ವಿದ್ಯುತ್ ಸಂಪರ್ಕದ ವಿಚಾರವಾಗಿ ತಗಾದೆ ಎತ್ತಿದ್ದಾರೆ. ಆ ಬಳಿಕ ಮಾತಿಗೆ ಮಾತು ಬೆಳೆದು ಕರ್ತವ್ಯದಲ್ಲಿ ಅಧಿಕಾರಿ ಸಹಿತ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

Ad Widget . . Ad Widget . Ad Widget .
Ad Widget

ಸದ್ಯ ಮೂವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: